97 ದಿನ ಕಳೆದರೂ ಗರಿಷ್ಟ ಮಟ್ಟ ಕಾಯ್ದು ಕೊಂಡಿರುವ ಕೆಆರ್ ಎಸ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯವನ್ನು 1933ರಲ್ಲಿ ನಿರ್ಮಿಸಲಾಗಿದೆ, ಇದೇ ಮೊದಲ ಬಾರಿಗೆ ಕೆಆರ್ ಎಸ್ ಜಲಾಶಯ ಕಳೆದ ಮೂರು ತಿಂಗಳಿನಿಂದಲೂ ಗರಿಷ್ಟ ಮಟ್ಟವನ್ನು ಕಾಪಾಡಿಕೊಂಡು ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯವನ್ನು 1933ರಲ್ಲಿ ನಿರ್ಮಿಸಲಾಗಿದೆ, ಇದೇ ಮೊದಲ ಬಾರಿಗೆ ಕೆಆರ್ ಎಸ್ ಜಲಾಶಯ ಕಳೆದ ಮೂರು ತಿಂಗಳಿನಿಂದಲೂ ಗರಿಷ್ಟ ಮಟ್ಟವನ್ನು ಕಾಪಾಡಿಕೊಂಡು ಬಂದಿದೆ. 

ಗುರುವಾರ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 124.8 ಅಡಿ ಇದ್ದು, 97 ದಿನಗಳಿಂದಲೂ ಇದೇ ಮಟ್ಟದಲ್ಲಿ ನೀರಿದೆ, ಸತತವಾಗಿ ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಮಟ್ಟ ಹಾಗೆಯೇ ಇದೆ.

3,951 ಕ್ಯೂಸೆಕ್ಸ್ ಒಳಹರಿವಿದ್ದು, 4,873 ಕ್ಯೂಸೆಕ್ಸ್  ಹೊರ ಹರಿವಿತ್ತು,  ಒಟ್ಟಾರೆ 49.31 ಅಡಿ ನೀರು ಸಂಗ್ರಹವಾಗಿದೆ, ಇದು ಬೆಂಗಳೂರು ಮತ್ತು ಮೈಸೂರು ಜನತೆ ನಿಟ್ಟುಸಿರು ಬಿಡುವಂತಾಗಿದೆ,ಈ ಬಾರಿಯ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ, ಕಳೆದ ಬಾರಿ ಜಲಾಶಯ ನೀರಿನ ಪ್ರಮಾಣದಲ್ಲಿ ತೀರಾ ಕಡಿಮೆಯಾಗಿತ್ತು, 

ಈ ಭಾರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಂದು ವಾರದಲ್ಲೇ ಜಲಾಶಯ ಭರ್ತಿಯಾಗಿತ್ತು, ಅಕ್ಟೋಬರ್ 15 ರ ವೇಳೆಗೆ ಗರಿಷ್ಟ ಮಟ್ಟ ತಲುಪಿತ್ತು. ಅದೇ ಮಟ್ಟ ಇಂದಿಗೂ ಇದೆ, ನೀರಾವರಿ ನಿಗಮ ಅಧಿಕಾರಿಗಳು ಕೃಷಿಗಾಗಿ ನೀರು ಬಿಟ್ಟರು ಜಲಾಶಯದ ನೀರಿನ ಮಟ್ಟ, ಕಡಿಮೆಯಾಗಿಲ್ಲ,

ಹೀಗಾಗಿ ಮಂಡ್ಯ ರೈತರು ಈಗಾಗಲೇ ಎರಡನೇ  ಬಾರಿ ಭತ್ತದ  ಬೆಳೆ ಬೆಳೆಯಲು ಸಿದ್ಧರಾಗಿದ್ದಾರೆ, ಈ ಬಾರಿ ತಮ್ಮ ಬೆಳೆಗೆ ಉತ್ತಮ ಬೆಳೆಯಬಹುದೆಂಬ ವಿಶ್ವಾಸದಲ್ಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com