ಚುನಾವಣಾ ಆಯೋಗ
ಚುನಾವಣಾ ಆಯೋಗ

ಸಂಪುಟ ಸಭೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ: ಚುನಾವಣಾ ಆಯೋಗ

ಉಪಚುನಾವಣೆ ಹತ್ತಿರ ಇರುವಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ಸಭೆ ನಡೆಸಿದ್ದರ ಕುರಿತು ಸಾಕಷ್ಟು ಪ್ರಶ್ನೆ ಏಳತೊಡಗಿದ್ದು, ಸಂಪುಟ ಸಭೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುವ ಮೂಲಕ ಈ ಎಲ್ಲಾ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಗುರುವಾರ ತೆರೆ ಎಳೆದಿದೆ.

ಬೆಂಗಳೂರು: ಉಪಚುನಾವಣೆ ಹತ್ತಿರ ಇರುವಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ಸಭೆ ನಡೆಸಿದ್ದರ ಕುರಿತು ಸಾಕಷ್ಟು ಪ್ರಶ್ನೆ ಏಳತೊಡಗಿದ್ದು, ಸಂಪುಟ ಸಭೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುವ ಮೂಲಕ ಈ ಎಲ್ಲಾ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಗುರುವಾರ ತೆರೆ ಎಳೆದಿದೆ.

ಸಂಪುಟ ಸಭೆ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ್ದು, ಸಭೆ ವೇಳೆ ಸರ್ಕಾರ ಯಾವುದಾದರೂ ಘೋಷಣೆಗಳನ್ನು ಮಾಡಿದ್ದೇ ಆಗಿದ್ದರೆ, ಅದು ಗಂಭೀರ ವಿಚಾರವಾಗುತ್ತಿದ್ದು. ಆಡಳಿತ ಮುಂದುವರೆಯುತ್ತಿರುವ ಕಾರಣ ಸಂಪುಟ ಸಭೆ ನಡೆಸುವುದು ಸರಿಯಾಗಿಯೇ ಇದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.  

15 ಕ್ಷೇತ್ರಗಳಲ್ಲಿ ಒಟ್ಟಾರೆ 37 ಲಕ್ಷ ಮತದಾರರಿದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಮತ್ತು ಅಕ್ರಮಗಳನ್ನು ತಡೆಯಲು 15 ಕ್ಷೇತ್ರಗಳಲ್ಲಿ ಒಟ್ಟು 282 ಮೊಬೈಲ್ ತಂಡಗಳನ್ನು ನೇಮಕ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 779 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com