ವೈದರ ಮೇಲಿನ ಹಲ್ಲೆ ನಿಲ್ಲಬೇಕು: ಡಾ. ಸಿ.ಎನ್. ಮಂಜುನಾಥ್

ವೈದ್ಯರು ರೋಗಿಗಳ ಹಿತ ರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಕೆಲವೊಂದು ಸಂದರ್ಭದಲ್ಲಿ ರೋಗಿ ಮೃತಪಟ್ಟರೆ ವೈದ್ಯರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಅಂತಹ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡುವುದು ತರವಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಡಾ.ಸಿಎನ್ ಮಂಜುನಾಥ್
ಡಾ.ಸಿಎನ್ ಮಂಜುನಾಥ್

ಬೆಂಗಳೂರು: ವೈದ್ಯರು ರೋಗಿಗಳ ಹಿತ ರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಕೆಲವೊಂದು ಸಂದರ್ಭದಲ್ಲಿ ರೋಗಿ ಮೃತಪಟ್ಟರೆ ವೈದ್ಯರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಅಂತಹ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡುವುದು ತರವಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಸೂಕ್ತ ಸಂದರ್ಭದಲ್ಲಿ ವೈದ್ಯರು ಗುಣಮಟ್ಟ ಚಿಕಿತ್ಸೆ ನೀಡಿದರೂ, ಕೆಲವೊಮ್ಮೆ ರೋಗಿಗಳು ಮೃತರಾಗುತ್ತಾರೆ. ಆಗ ಸಂಬಂಧಪಟ್ಟ ಕುಟುಂಬದವರು ಮತ್ತು ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ನಡೆಯುತ್ತಿದ್ದು, ಇದು ನಿಲ್ಲಬೇಕು. ಅಮೂಲ್ಯ ಜೀವ ಕಳೆದುಕೊಂಡರೆ ನೋವಾಗುವುದು ಸಹಜ. ಇಂತಹ ಪ್ರತಿಕೂಲ ಸಂದರ್ಭದಲ್ಲಿ ಜನ ಸಂಯಮದಿಂದ ವರ್ತಿಸಬೇಕು ಎಂದರು.

ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಖ್ಯಾತ ನರಶಾಸ್ತ್ರ ತಜ್ಞ ಡಾ.ಎಚ್.ಎಸ್ ಸುರೇಶ್ ಕುಮಾರ್ ವಿರಚಿತ "ನೆನಪಿನ ಶಕ್ತಿ ಹೆಚ್ವಿಸಿಕೊಳ್ಳುವುದು ಹೇಗೆ?" ಮತ್ತು "ನಿದ್ರೆ ಆರೋಗ್ಯಕ್ಕೆ ಸಂಜೀವಿನಿ" ಪುಸ್ತಕ ಬಿಡುಗಡೆ ಮಾಡಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ರೋಗಿಯ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಯ ಪರವಾಗಿ ದೇವರನ್ನು ಪೂಜಿಸುತ್ತೇವೆ ಎಂದು ಹೇಳಿದರು.

ವೈದ್ಯರೇ ರೋಗಿಗಳಾಗುವ ವ್ಯವಸ್ಥೆ ರೂಪಗೊಂಡಿದೆ. ಕಳೆದ ಒಂದು ವರ್ಷದಲ್ಲಿ 25 ರಿಂದ 30 ವಯೋಮಾನದ ವೈದ್ಯರಿಗೆ ಹೃದಯಾಘಾತವಾಗಿದೆ. ಒತ್ತಡಗಳ ನಡುವೆಯೇ ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೃತ್ತಿ ಧರ್ಮ ಗೌರವಿಸಿ ವೈದ್ಯರು ಕೆಲಸ ಮಾಡುತ್ತಿದ್ದರೂ ಅವರ ಮೇಲೆ ಆಗಿಂದಾಗ್ಗೆ ಹಲ್ಲೆ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com