ಬೆಳಗಾವಿ: ನಾಪತ್ತೆಯಾಗಿದ್ದ ಬಾಲಕಿ ಶವ ಪಕ್ಕದ ಮನೆಯ ಕಪಾಟಿನಲ್ಲಿ ಪತ್ತೆ, ಮನೆ ಮಾಲೀಕ ಆತ್ಮಹತ್ಯೆ

ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿಯ ಶವ ಸೋಮವಾರ ಪಕ್ಕದ ಮನೆಯ ಕಪಾಟಿನಲ್ಲಿ ಪತ್ತೆಯಾಗಿದ್ದು, ಮನೆ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿಯ ಶವ ಸೋಮವಾರ ಪಕ್ಕದ ಮನೆಯ ಕಪಾಟಿನಲ್ಲಿ ಪತ್ತೆಯಾಗಿದ್ದು, ಮನೆ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಿಪ್ಪಾಣಿ ಹೊರವಲಯದ ಕೋಡಣಿ ಗ್ರಾಮದಲ್ಲಿ ಇಂತಹದೊಂದು ಭಯಾನಕ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ.

ನಾಲ್ಕು ವರ್ಷದ ಶ್ರೇಯಾ ಮಾನೆ ಕೊಲೆಯಾಗಿದ್ದು, ಬಾಲಕಿ ಸಂಬಂಧಿ ಕುಮಾರ ರಾನೋಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಳೆದ ಶುಕ್ರವಾರ ಆಟವಾಡಲು ತೆರಳಿದ್ದ ಮಗು ಮನೆಗೆ ಬಾರದಿರುವುದರಿಂದ ಆತಂಕಗೊಂಡ ತಂದೆ, ತಾಯಿ ಹಾಗೂ ಗ್ರಾಮದ ಜನ ಹುಡುಕಾಟ ನಡೆಸಿದ್ದರು. ಆದರೆ ಗ್ರಾಮದಲ್ಲೆಲ್ಲೂ ಕಾಣದ ಹಿನ್ನೆಲೆಯಲ್ಲಿ  ಬಾಲಕಿ ತಂದೆ ಬಸವೇಶ್ವರ ಕಲ್ಲಪ್ಪಾ ಮಾನೆ ತಡರಾತ್ರಿ ನಿಪ್ಪಾಣಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಮಗು ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು.

ಬಾಲಕಿ ಇಂದು ಕುಮಾರ ರಾನೋಜಿ ಮನೆಯ ಕಪಾಟಿನಲ್ಲಿ ಶವವಾಗಿ ಪತ್ತೆಯಾಗಿದೆ.

ಈ ಮಧ್ಯೆ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com