ಬಿಆರ್‌ಟಿ ಪರಿಸರ ಸೂಕ್ಷ್ಮ ವಲಯ: ಕೇಂದ್ರ ಸರ್ಕಾರದಿಂದ ಘೋಷಣೆ, ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್

ವೈವಿಧ್ಯಮಯ ವನ್ಯ ಸಂಪತ್ತು, ಜೀವ ಸಂಕುಲಕ್ಕೆ ಆಶ್ರಯತಾಣವಾಗಿರುವ ಬಿಳಿಗಿರಿರಂಗನಾಥ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ 240 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಳೆದ 19 ರಂದು ಅಧಿಸೂಚನೆ ಪ್ರಕಟಿಸಿದೆ.
ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ
ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ

ಚಾಮರಾಜನಗರ : ವೈವಿಧ್ಯಮಯ ವನ್ಯ ಸಂಪತ್ತು, ಜೀವ ಸಂಕುಲಕ್ಕೆ ಆಶ್ರಯತಾಣವಾಗಿರುವ ಬಿಳಿಗಿರಿರಂಗನಾಥ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ 240 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಳೆದ 19 ರಂದು ಅಧಿಸೂಚನೆ ಪ್ರಕಟಿಸಿದೆ.

ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ತಾಲೂಕಿನ ಒಟ್ಟು 49 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. 30ಕ್ಕೂ ಹೆಚ್ಚು ವಾಣಿಜ್ಯ ಚಟುವಟಿಕೆಗೆ ಈ ಮೂಲಕ ಬ್ರೇಕ್ ಬಿದ್ದಿದೆ‌. ಆದರೆ, ಪರಿಸರ ಸ್ನೇಹಿ ಚಟುವಟಿಕೆ ನಡೆಸಲು ಯಾವುದೇ ಆತಂಕ ಇಲ್ಲ.

ಪರಿಸರ ಸೂಕ್ಷ್ಮ ಗ್ರಾಮಗಳು: ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಎಮ್ಮೆಹಟ್ಟಿ, ಹೊನ್ನಮೆಟ್ಟಿ, ಬೇಡಗುಳಿ, ಚಿಕ್ಕಮುದ್ದಹಳ್ಳಿ, ದೊಡ್ಡಮುದ್ದಹಳ್ಳಿ, ಪುಣಜನೂರು, ಹೊನ್ನೇಗೌಡನಹುಂಡಿ, ಹರದನಹಳ್ಳಿ ಜಿಲ್ಲಾ ಅರಣ್ಯ, ಹೊಂಡರಬಾಳು, ಜ್ಯೋತಿಗೌಡನಪುರ, ಮೇಲುಮಾಳ, ತಿಮ್ಮೇಗೌಡನಪಾಳ್ಯ, ಯರಂಗಬಳ್ಳಿ, ಗುಂಬಳ್ಳಿ, ವಡ್ಡಗೆರೆ, ಗೌಡಹಳ್ಳಿ, ಆಲ್ಕೆರೆ ಅಗ್ರಹಾರ, ಜೋಡಿಮೆಲ್ಲಹಳ್ಳಿ, ಮಲಾರಪಾಳ್ಯ, ದೇವರಹಳ್ಳಿ, ಶಿವಕಹಳ್ಳಿ, ಅರೆಪಾಳ್ಯ, ಸೂರಾಪುರ, ಜಕ್ಕಳ್ಳಿ, ತಿಮ್ಮರಾಜೀಪುರ, ಮಧುವನಹಳ್ಳಿ, ಹರುವನಪುರ, ಲಕ್ಷ್ಮಿಪುರ, ಹೊನ್ನ ಬೀರೆಬೆಟ್ಟ, ಚೆನ್ನಲಿಂಗನಹಳ್ಳಿ, ಚಿಕ್ಕ ಮಾಲಾಪುರ, ಸೀರಗೋಡು, ಲಕ್ಕನಹಳ್ಳಿ, ಮಾವತ್ತೂರು, ಗುಂಡಿಮಾಳ, ಅರಬಿಕೆರೆ, ಪಿಜಿ ಪಾಳ್ಯ ಹುತ್ತೂರು ಬೈಲೂರು ಸೇರಿದಂತೆ ನಲವತ್ತೊಂಬತ್ತು ಗ್ರಾಮಗಳು ಬಿಆರ್ಟಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿವೆ .
ವರದಿ;- ಗೂಳಿಪುರ ನಂದೀಶ ಎಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com