ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಡಿಟೋನೇಟರ್ ಸ್ಫೋಟ, ಐವರು ವಿಜ್ಞಾನಿಗಳಿಗೆ ಗಾಯ

ವಿಧ್ಗಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ಡಿಟೋನೇಟರ್ ಸ್ಫೋಟಗೊಂಡ ಪರಿಣಾಮ ಐವರು ವಿಜ್ಞಾನಿಗಳು ಗಾಯಗೊಂಡಿರುವ ಘಟನೆ ಬೆಂಗಳುರಿನ ಮಡಿವಾಳದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧ್ಗಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ಡಿಟೋನೇಟರ್ ಸ್ಫೋಟಗೊಂಡ ಪರಿಣಾಮ ಐವರು ವಿಜ್ಞಾನಿಗಳು ಗಾಯಗೊಂಡಿರುವ ಘಟನೆ ಬೆಂಗಳುರಿನ ಮಡಿವಾಳದಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು ಗಾಯಾಳು ವಿಜ್ಞಾನಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟಾರೆ ಒಂಬತ್ತು ಡಿಟೋನೇಟರ್ ಗಳನ್ನು ಪರಿಶೀಲಿಸಲಾಗುತ್ತಿತ್ತು. ಆಗ ಅದರಲ್ಲಿ ಒಂದು ಡಿಟೋನೇಟರ್ ಸ್ಫೋಟವಾಗಿದೆ. ವಿವಿಧ ಪ್ರಕರಣಗಳಲ್ಲಿ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದ ಡಿಟೋನೇಟರ್ ಗಗಳನ್ನು ಪರಿಕ್ಷೆಗಾಗಿ ವಿಧ್ಗಿ ವಿಜ್ಞಾನ ಪ್ರಯೋಗಾಲಯಕ್ಕೆ ತರಲಾಗುತ್ತದೆ. ಇಂತಹಾ ಒಂದು ಡಿಟೋನೇಟರ್ ಸ್ಫೋಟವಾಗಿ ವಿಜ್ಞಾನಿಗಳು ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಬೆಂಗಳೂರು ಪೋಲೀಸ್ ಆಯುಕ್ತ ಭಾಸ್ಕರ ರಾವ್, ಡಿಸಿಪಿ ಇಶಾಪಂತ್ ಸೇರಿ ಹಲವು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com