ಪುತ್ತೂರು: ಕಲ್ಲಂದಡ್ಕದಲ್ಲಿ ಗುಂಡಿನ ದಾಳಿ, ಪ್ರಮುಖ ಆರೋಪಿ ಮಡಿಕೇರಿಯಲ್ಲಿ ಬಂಧನ
ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಅಬ್ದುಲ್ ಖಾದರ್ ಎಂಬವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಬ್ಲೇಡ್ ಸಾದಿಕ್ ಎಂಬಾತನನ್ನು ಮಡಿಕೇರಿಯ ಗಾಳಿಬೀಡು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
Published: 30th November 2019 10:14 PM | Last Updated: 30th November 2019 10:14 PM | A+A A-

ಸಂಗ್ರಹ ಚಿತ್ರ
ಮಂಗಳೂರು: ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಅಬ್ದುಲ್ ಖಾದರ್ ಎಂಬವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಬ್ಲೇಡ್ ಸಾದಿಕ್ ಎಂಬಾತನನ್ನು ಮಡಿಕೇರಿಯ ಗಾಳಿಬೀಡು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
ನ.26ರಂದು ಅಬ್ದುಲ್ ಖಾದರ್ ಅವರ ಮನೆಯ ಸಮೀಪ ಕಾರಿನಲ್ಲಿ ಬಂದ ಬ್ಲೇಡ್ ಸಾದಿಕ್ ಮತ್ತು ಆತನ ತಂಡ ಅಬ್ದುಲ್ ಖಾದರ್ ಅವರ ಮೇಲೆ ಗುಂಡು ಹಾರಾಟ ನಡೆಸಿ ಪರಾರಿಯಾಗಿತ್ತು. ಗುಂಡೇಟಿನಿಂದ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅಬ್ದುಲ್ ಖಾದರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಎದೆಗೆ ಬಿದ್ದ ಗುಂಡನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದ್ದು, ತನಿಖೆಗಾಗಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.