ಯುವ ದಸರಾ,ದಸರಾ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಿ.ವಿ.ಸಿಂಧು ಚಾಲನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಯುವ ದಸರಾ ಹಾಗೂ ದಸರಾ ಕ್ರೀಡಾಕೂಟಕ್ಕೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಇಂದು ಚಾಲನೆ ನೀಡಿದರು.

Published: 01st October 2019 07:54 PM  |   Last Updated: 01st October 2019 08:57 PM   |  A+A-


CMBsyPV_Sindhu

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಿ.ವಿ. ಸಿಂಧೂ

Posted By : Nagaraja AB
Source : ANI

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಯುವ ದಸರಾ ಹಾಗೂ ದಸರಾ ಕ್ರೀಡಾಕೂಟಕ್ಕೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಇಂದು ಚಾಲನೆ ನೀಡಿದರು.

ಕಳೆದ ಸೆಪ್ಟೆಂಬರ್ 10 ರಂದು ಯುವ ದಸರಾ ಹಾಗೂ ದಸರಾ ಕ್ರೀಡಾಕೂಟಗಳಿಗೆ ಚಾಲನೆ ನೀಡಲು ಪಿ. ವಿ. ಸಿಂಧು ಅವರನ್ನು  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಆಹ್ವಾನಿಸಿದರು. 

ಕ್ರೀಡಾ ಕ್ಷೇತ್ರದಲ್ಲಿ ನೀವು ಅತ್ಯುನ್ನತ ಸಾಧನೆ ಮಾಡಿ ಯುವಕರಿಗೆ ಪ್ರೇರಣೆಯಾಗಿದ್ದೀರಿ. ಈ ಬಾರಿ ನಡೆಯಲಿರುವ 410ನೇ ದಸರಾ ಸಮಾರಂಭದ ಯುವ ದಸರಾವನ್ನು ಉದ್ಘಾಟಿಸುವ ಮೂಲಕ ನಾವು ನೀಡುತ್ತಿರುವ ಗೌರವ ಸ್ವೀಕರಿಸಬೇಕು ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದರು. 

ಯುವ ದಸರಾದ ಪ್ರಮುಖ ಆಕರ್ಷಣೆಯಾಗಿದ್ದ ಗಾಯಕಿ ರಾಣು ಮಂಡಲ್‌ ಅನಾರೋಗ್ಯದ ಕಾರಣ ಆಗಮಿಸಿಲ್ಲ.  ಖ್ಯಾತ ಬಾಲಿವುಡ್ ಗಾಯಕರಾದ ಗುರು ರಾಂಧವ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯುತ್ತಿದೆ.

ನಾಳೆ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಸಂಗೀತ ಕಾರ್ಯಕ್ರಮ ನೀಡಲಿದ್ದು, ಮುಂಬೈ ತಂಡದಿಂದ ರಷ್ಯನ್ ಆಕ್ಟ್, ಕ್ವಿಕ್ ಏಂಜಲ್ಸ್, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 5 ರಂದು ನಡೆಯಲಿರುವ ಸ್ಯಾಂಡಲ್ ವುಡ್ ನೈಟ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಧುಕೋಕಿಲ, ರಕ್ಷಿತ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp