ಲಕ್ಷ್ಮಿ ಹೆಬ್ಬಾಳ್ಕರ್ ಬಳಿಕ ಮತ್ತೊಬ್ಬ ಕೈ ನಾಯಕನಿಗೆ ಇಡಿ ಗಾಳ! ಕೆ.ಎಸ್.ರಾಜಣ್ಣಗೆ ಸಮನ್ಸ್ ಜಾರಿ

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಳಿಕ ಇದೀಗ ಮತ್ತೊಬ್ಬ ಕೈ ನಾಯಕನಿಗೆ ಇಡಿ ಕಂಟಕ ಎದುರಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಕಾಂಗ್ರೆಸ್ ಶಾಸಕ ಕೆ.ಎಸ್. ರಾಜಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಲಕ್ಶ್ಮಿ ಹೆಬ್ಬಾಳ್ಕರ್, ಕೆ.ಎಸ್. ರಾಜಣ್ಣ
ಲಕ್ಶ್ಮಿ ಹೆಬ್ಬಾಳ್ಕರ್, ಕೆ.ಎಸ್. ರಾಜಣ್ಣ

ಬೆಂಗಳೂರು: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಳಿಕ ಇದೀಗ ಮತ್ತೊಬ್ಬ ಕೈ ನಾಯಕನಿಗೆ ಇಡಿ ಕಂಟಕ ಎದುರಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಕಾಂಗ್ರೆಸ್ ಶಾಸಕ ಕೆ.ಎಸ್. ರಾಜಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಲಕ್ಷ್ಮೀಹೆಬ್ಬಾಳ್ಕರ್ ಅವರ ಮಾಲೀಕತ್ವದ ಹರ್ಷಶುಗರ್ಸ್‍ಗೆ ಸಾಲ ನೀಡಿದ ಸಂಬಂಧ ಮಾಹಿತಿ ಪಡೆಯುವ ಸಲುವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎಸ್. ರಾಜಣ್ಣ ಅವರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿದೆ.

ಸೆ.24ರಂದು ಇಡಿ ನೋಟೀಸ್ ರವಾನೆ ಮಾಡಿದ್ದು ಅಕ್ಟೋಬರ್ 8ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದೆ.  ಆದರೆ ಇದೀಗ ಎಂಟರಂದು ದಸರಾ ಆದ ಕಾರಣ ಮರುದಿನ -ಒಂಬತ್ತನೇ ದಿನಾಂಕಕ್ಕೆ ವಿಚಾರಣೆಗೆ ಹಾಜರಾಗಲು ಈಮೇಲ್ ಸಂದೇಶ ರವಾನಿಸಿಸಿದೆ.

ಈ ಸಂಬಂಧ ತುಮಕೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಮಾಜಿ ಶಾಸಕರು "ಇಡಿ ಸಹಾಯಕ ನಿರ್ದೇಶಕರು ಟೆಲಿಫೋನ್ ಕರೆ ಮಾಡಿ ಅಕ್ತೋಬರ್ ಎಂಟರಂದು ದಸರಾ ಇದ್ದ ಕಾರಣ ಒಂಬತ್ತಕ್ಕೆ ವಿಚಾರಣೆಗೆ ಬರಬೇಕು ಎಂದಿದ್ದಾರೆ. ಇದರ ಸಂಬಂಧ ತನಗೆ ಈಮೇಲ್ ಸಹ ಬಂದಿದ್ದು ಅಕ್ಟೋಬರ್ ಒಂಬತ್ತಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಆದರೆ ಯಾವ ಮಾಹಿತಿ ಬೇಕಿದೆ ಎಂದು ನನಗೆ ತಿಳಿದಿಲ್ಲ" ಎಂದಿದ್ದಾರೆ.

"ನಾವು ಲಕ್ಶ್ಮಿ ಹೆಬ್ಬಾಳ್ಕರ್ ಅವರ ಹರ್ಷಶುಗರ್ಸ್‍ಗೆ ಸಾಲ ನಿಡಿದ್ದೇವೆ. ಅಪೆಕ್ಸ್ ಬ್ಯಾಂಕ್ ನಡಿ ಬರುವ ಕೆಲ ಬ್ಯಾಂಕುಗಳು ಒಟ್ಟಾಗಿ ಅವರಿಗೆ ಸುಮಾರು 300 ಕೋಟಿ ರು. ಸಾಲ ನಿಡಿದ್ದೇವೆ. ತುಮಕೂರು ಡಿಸಿಸಿ ಬ್ಯಾಂಕ್ ನಿಂದಲೂ 25  ಕೋಟಿ ಸಾಲ ನೀಡಿದ್ದೇವೆ. ಇದೇ ಕಾರಣಕ್ಕೆ ಈಗ ಇಡಿ ನೋಟೀಸ್ ನೀಡಿರಬಹುದು" ರಾಜಣ್ಣ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com