ರಾಜ್ಯದ 7 ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ: ಸಿಬಿಐ 

ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳಷ್ಟೇ ಅಲ್ಲದೆ, ರಾಜ್ಯ 7 ಪ್ರಮುಖ ಸ್ವಾಮೀಜಿಗಳ ಟೆಲಿಫೋನ್ ಗಳನ್ನೂ ಕದ್ದಾಲಿಕೆ ಮಾಡಲಾಗಿದೆ ಎಂದು ಕೇಂದ್ರೀಯ ತನಿಖೆ ಸಂಸ್ಥೆ ಸೋಮವಾರ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳಷ್ಟೇ ಅಲ್ಲದೆ, ರಾಜ್ಯ 7 ಪ್ರಮುಖ ಸ್ವಾಮೀಜಿಗಳ ಟೆಲಿಫೋನ್ ಗಳನ್ನೂ ಕದ್ದಾಲಿಕೆ ಮಾಡಲಾಗಿದೆ ಎಂದು ಕೇಂದ್ರೀಯ ತನಿಖೆ ಸಂಸ್ಥೆ ಸೋಮವಾರ ಹೇಳಿದೆ. 

ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯದ 7 ಸ್ವಾಮೀಜಿಗಳು ಹಾಗೂ ಅವರ ಆತ್ಮೀಯರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ರಂಭಾಪುರಿ ಸ್ವಾಮಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿ, ಮೈಸೂರು ಸುತ್ತೂರು ಮಠದ ದೇಶಿಕೇಂದ್ರ ಮಹಾಸ್ವಾಮಿ, ಕನಕಪುರ ಪೀಠದ ನಿರಾಂಜನಾನಂದ ಸ್ವಾಮಿ, ಚಿತ್ರದುರ್ಗ ಮದರಚೆನ್ನಯ್ಯ ಸ್ವಾಮಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮಿ ಹಾಗೂ ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿಗಳ ಫೋನ್ ಗಳನ್ನು ಕದ್ದಾರಿಗೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಮಾಜಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ವೇಳೆ ನಿರ್ಮಲಾನಂದ ಸ್ವಾಮಿಗಳ ಫೋನ್'ನನ್ನು 720 ಗಂಟೆಗಳ ಕಾಲ ಕದ್ದಾಲಿಕೆ ಮಾಡಿರುವುದು ಬಹಿರಂಗಗೊಂಡಿದೆ. 

ತಾಂತ್ರಿಕ ವಿಭಾಗದಲ್ಲಿ ಎಸಿಪಿ ಶ್ರೇಣಿಯಲ್ಲಿರುವ ಅಧಿಕಾರಿಯೊಬ್ಬರು, ಅಕ್ರಮರಕ್ತ ಚಂದನ ಮಾರಾಟಗಾರರ ಶಂಕಿತರ ಪಟ್ಟಿಯಲ್ಲಿ ನಿರ್ಮಲಾನಂದ ಸ್ವಾಮೀಜಿಗಳ ಫೋನ್ ನಂಬರ್'ನ್ನು ಸೇರ್ಪಡೆಗೊಳಿಸಿ, ಟೆಲಿಫೋನ್ ಕದ್ದಾಲಿಕೆ ಮಾಡಿದ್ದಾರೆ. ಇತರ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಂಡು ನಂತರ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರ ಆಪ್ತ ಕಾರ್ಯದರ್ಶಿಗಳಾದ ರಘು ಅಥವಾ ಸತೀಶ್ ಅವರ ವೈಯಕ್ತಿಕ ವಾಟ್ಸ್'ಆ್ಯಪ್ ಸಂಖ್ಯೆಗಳಿಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ. 

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿದ್ದರೂ, ಪಕ್ಷಗಳಲ್ಲಿ ಕೆಲವೊಂದು ಗಂಭೀರ ಅಸಮಾಧಾನಗಳಿರುವುದು ಕಂಡು ಬಂದಿದೆ. ಪ್ರಸ್ತುತ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ನಾಯಕರು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಭಾವಿ ನಾಯಕರುಗಳಾಗಿದ್ದಾರೆ. ಮಾರ್ಚ್ ಬಳಿಕ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಮೇಲೆ ಬೇಸರಗೊಂಡಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಇತರೆ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂಬ ಮಾಹಿತಿ ತಿಳಿದು ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ನಿರ್ಮಲಾನಂದ ಸ್ವಾಮೀಜಿಗಳು ಬಿಜೆಪಿ ನಾಯಕರೊಬ್ಬರೊಂದಿಗೆ ಆತ್ಮೀಯರಾಗಿದ್ದಾರೆ. ಚುನಾವಣೆ ವೇಳೆ ಸಂಸದೆ ಸುಮಲತಾ ಅವರಿಗೆ ಬೆಂಬಲವನ್ನೂ ನೀಡಿದ್ದರು. ಕೇವಲ ನಿರ್ಮಲಾನಂದ ಸ್ವಾಮೀಜಿಗಳು ಅಷ್ಟೇ ಅಲ್ಲದೆ, ಅವರ ಆಪ್ತರ ಫೋನ್ ಗಳನ್ನು ಕದ್ದಾಲಿಗೆ ಮಾಡಲಾಗಿದೆ. ಲಿಂಗಾಯತ ನಾಯಕರ ಫೋನ್ ಗಳನ್ನೂ ಕದ್ದಾರಿಗೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಶೀಘ್ರದಲ್ಲೇ ಹೆಚ್'ಡಿಕೆಗೆ ಸಿಬಿಐ ನೋಟಿಸ್ 
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ಪಾತ್ರವೇ ಇಲ್ಲ ಎಂದು ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪ್ರಕರಣ ಸಂಬಂಧ ಸಿಬಿಐ ಶೀಘ್ರದಲ್ಲಿಯೇ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. 

ಕುಮಾರಸ್ವಾಮಿಯವರ ಆಪ್ತ ಕಾರ್ಯದರ್ಶಿಗಳಾದ ರಘು ಹಾಗೂ ಸತೀಶ್ ಅವರ ಫೋನ್ ಕದ್ದಾಲಿಕೆ ಮಾಡುವಂತೆ ಸಂಖ್ಯೆಗಳಿದ್ದ ಪಟ್ಟಿಯನ್ನು ತಮ್ಮ ಕೈಗೆ ಕೊಟ್ಟಿದ್ದರು ಎಂದು ವಿಚಾರಣೆ ವೇಳೆ ಅಲೋಕ್ ಕುಮಾರ್ ಹೇಳಿಕೊಂಡಿದ್ದಾರೆ. ಹೀಗಾಗಿ ಸಿಬಿಐ ಕುಮಾರಸ್ವಾಮಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
 
ಕುಮಾರಸ್ವಾಮಿ ಹಾಗೂ ಅವರ ಇಬ್ಬರು ಆಪ್ತ ಕಾರ್ಯದರ್ಶಿಗಳಿಗೆ ಶೀಘ್ರದಲ್ಲಿಯೇ ನೋಟಿಸ್ ಜಾರಿ ಮಾಡಲಾಗುತ್ತದೆ. ಕುಮಾರಸ್ವಾಮಿಯವರ ಆದೇಶದ ಮೇರೆಗೆ ಅಲೋಕ್ ಕುಮಾರ್ ಅವರಿಗೆ ಪಟ್ಟಿ ನೀಡಲಾಗಿತ್ತು ಎಂಬುದನ್ನು ಈ ಇಬ್ಬರೂ ಒಪ್ಪಿಕೊಂಡಿದ್ದೇ ಆದರೆ, ಕುಮಾರಸ್ವಾಮಿಯವರಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಅನಿತಾ ಕುಮಾರಸ್ವಾಮಿ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದೆ?
ರಘು ಹಾಗೂ ಸತೀಶ್ ಅವರ ಬಳಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವರ ಟೆಲಿಫೋನ್ ಕದ್ದಾಲಿಕೆ ಮಾಡಿರುವ ದಾಖಲೆಗಳಿವೆ ಎಂದು ಕೆಲ ರಾಜಕೀಯ ನಾಯಕರು ಹೇಳಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com