ಸಂಚಾರ ನಿಯಮ ಉಲ್ಲಂಘನೆ: ಫೋಟೋ ತೆಗೆದು ಕಳುಹಿಸಿ; ಸಾರ್ವಜನಿಕರಿಗೆ ಪೊಲೀಸ್ ಆಯುಕ್ತ ಮನವಿ

ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಫೋಟೋ ತೆಗೆದು ಸಾರ್ವಜನಿಕರು ಕಳುಹಿಸಿದರೆ ತಪ್ಪಿತಸ್ಥರಿಗೆ ತಂಡ ವಿಧಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಭಾಸಕರ್ ರಾವ್ ಅವರು ಹೇಳಿದ್ದಾರೆ. 
bhaskar rao
bhaskar rao

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಫೋಟೋ ತೆಗೆದು ಸಾರ್ವಜನಿಕರು ಕಳುಹಿಸಿದರೆ ತಪ್ಪಿತಸ್ಥರಿಗೆ ತಂಡ ವಿಧಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಅವರು ಹೇಳಿದ್ದಾರೆ. 

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಿಗಾ ಇರಿಸಲು ಪಬ್ಲಿಕ್ ಐ ಜಾಲತಾಣ, ಆಯ್ಪ್ ರೂಪಿಸಿರುವ ಪೊಲೀಸ್ ಇಲಾಖೆ, ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ನೀಡುವಂತೆ ಜನರ ಬಳಿ ಮನವಿ ಮಾಡಿದೆ.

ಸಂಚಾರ ನಿಯಮಗಳನ್ನು ಯಾರಾದರೂ ಉಲ್ಲಂಘಿಸುವುದು ಕಂಡರೆ ಫೋಟೋ ತೆಗೆದು ಕಳುಹಿಸಿ. ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದು ಎಂದಿದ್ದಾರೆ. 

ಗೂಗಲ್ ಪ್ಲೇ ಸ್ಟೋರ್"ಗ ಹೋಗಿ ಪಬ್ಲಿಕ್ ಐ ಆ್ಯಪ್'ನ್ನು ಡೌನ್ ಲೋಡ್ ಮಾಡಿಕೊಳ್ಳಿ. ಅದರಲ್ಲೇ ಫೋಟೋ ಅಪ್ ಲೋಟ್ ಮಾಡಿ. ನೀವು ಕಳುಹಿಸಿದ ಫೋಟೋವನ್ನು ಪರಿಶೀಲಿಸಿ ತಪ್ಪಿಸತ್ಥರಿಗೆ ದಂಡದ ಇ-ಚಲನ್ ಕಳುಹಿಸಲಾಗುವುದು. ಫೋಟೋ ಕಳುಹಿಸಿದ ವ್ಯಕ್ತಿಯ ವಿವರಣೆಗಳನ್ನು ಗೌಪ್ಯವಾಗಿಡಲಾಗುವುದು. ಇದೇ ಆ್ಯಪ್ ಇನ್'ಸ್ಟಾಲ್ ಮಾಡಿಕೊಂಡು ನೀವು ನಾಗರಿಕ ಪೊಲೀಸ್ ಆಗಿ ಎಂದು ಟ್ವಿಟರ್ ನಲ್ಲಿ ಭಾಸ್ಕರ್ ರಾವ್ ಅವರು ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com