ಗಡುವು ಮುಗಿದರೂ ಶೌಚಾಲಯ ನಿರ್ಮಿಸದ ಅಧಿಕಾರಿಗಳು: ಸಂಕಷ್ಟದಲ್ಲಿ ಸರ್ಕಾರಿ ಶಾಲಾ ಮಕ್ಕಳು

ಬಯಲು ಶೌಚ ಮುಕ್ತದತ್ತ ದೇಶ ಮುನ್ನಡೆಯುತ್ತಿದ್ದರೆ, ನಮ್ಮ ರಾಜ್ಯದ ಶಿಕ್ಷಣಾಧಿಕಾರಿಗಳು ಮಾತ್ರ ಇನ್ನೂ ಹಿಂದೆಯೇ ಉಳಿದಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿವೆಯೋ, ಇಲ್ಲವೋ ಎಂಬುದರ ಬಗ್ಗೆ ಶಿಕ್ಷಣಾಧಿಕಾರಿ ಬಳಿಯೇ ಮಾಹಿತಿ ಇಲ್ಲದ ಪರಿಸ್ಥಿತಿ ಎದುರಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಯಲು ಶೌಚ ಮುಕ್ತದತ್ತ ದೇಶ ಮುನ್ನಡೆಯುತ್ತಿದ್ದರೆ, ನಮ್ಮ ರಾಜ್ಯದ ಶಿಕ್ಷಣಾಧಿಕಾರಿಗಳು ಮಾತ್ರ ಇನ್ನೂ ಹಿಂದೆಯೇ ಉಳಿದಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿವೆಯೋ, ಇಲ್ಲವೋ ಎಂಬುದರ ಬಗ್ಗೆ ಶಿಕ್ಷಣಾಧಿಕಾರಿ ಬಳಿಯೇ ಮಾಹಿತಿ ಇಲ್ಲದ ಪರಿಸ್ಥಿತಿ ಎದುರಾಗಿದೆ. 

ಕಳೆದ 5 ತಿಂಗಳ ಹಿಂದೆ ಪ್ರಾಥಮಿಕ ಶಿಕ್ಷಣ ಇಲಾಖೆ ವರದಿಯೊಂದರನ್ನು ಬಿಡುಗಡೆ ಮಾಡಿತ್ತು. ವರದಿಯಲ್ಲಿ 48,188 ಸರ್ಕಾರಿ ಶಾಲೆಗಳ ಪೈಕಿ 2,847 ಬಾಲಕರು ಹಾಗೂ 1,350 ಬಾಲಕಿಯರ 4,197 ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಎಂದು ತಿಳಿಸಿತ್ತು.  

ವರದಿ ಆಧರಿಸಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು, ನರೇಗಾ ನಿಧಿ ಬಳಕೆ ಮಾಡಿಕೊಂಡು ಸೆ.30ರೊಳಗಾಗಿ ಎಲ್ಲಾ ಶಾಲೆಗಳಲ್ಲೂ ಶೇ.100ರಷ್ಟು ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. 

ಪ್ರತೀ ವರ್ಷ ಪ್ರತೀ ಶಾಲೆಗಳಿಗೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ, 4,197 ಶಾಲೆಗಳಿಗೆ ಮಾತ್ರ ಈ ಹಣವನ್ನು ಬಳಕೆ ಮಾಡಿಲ್ಲ. ಬಳಕೆಯಾಗದ ಹಣವನ್ನು ಸರ್ಕಾರಕ್ಕೆ ಮರಳಿ ನೀಡುವಂತೆ ತಿಳಿಸಿದ್ದರು. ಅಲ್ಲದೆ, ವಾಟ್ಸ್ ಆ್ಯಪ್ ಗ್ರೂಪ್ ತೆರೆದು ಪ್ರತೀವಾರ ಶೌಚಾಲಯಗಳಿಲ್ಲದ ಶಾಲೆಗಳ ಕುರಿತು ಸಮೀಕ್ಷೆ ನಡೆಸುವಂತೆಯೂ ರಾಜ್ಯದ ಆಡಳಿತ ನಿರ್ದೇಶಕರಿಗೆ ಸೂಚಿಸಿದ್ದರು. ಇದರಂತೆ ಅಧಿಕಾರಿಗಳು ಪ್ರತೀ ತಿಂಗಳೂ ಪ್ರಾಥಮಿಕ ಹಾಗೂ ಫ್ರೌಢಶಾಲೆಗಳ ಶೌಚಾಲಯ ವ್ಯವಸ್ಥೆಗಳ ವರದಿಗಳನ್ನು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಬೇಕಿತ್ತು. ಆದರೆ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಇದೀಗ ಬಹಿರಂಗಗೊಂಡಿದೆ. 

ಶಾಲೆಗಳ ಶೌಚಾಲಯ ವ್ಯವಸ್ಥೆಗಳ ಕುರಿತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಬಳಿ ವರದಿ ಕೇಳಿದರೆ, 2019ರ ಮಾರ್ಚ್ ವರೆಗೆ ಮಾತ್ರವೇ ವರದಿ ಲಭ್ಯವಾಗಿದೆ. ಇದರ ವರದಿಯಲ್ಲಿ 698 ಪ್ರಾಥಮಿಕ ಶಾಲೆಗಳು ಹಾಗೂ 45 ಪ್ರೌಢಶಾಲೆಗಳಲ್ಲಿ ಶೌಚಾಲಯಗಳಿಲ್ಲ ಎಂದು ತಿಳಿಸಲಾಗಿದೆ. ತಿಂಗಳ ಆಧಾರದಲ್ಲಿ ವರದಿ ಸಂಗ್ರಹಿಸಿಲ್ಲ. ನಮ್ಮ ಬಳಿಯಿರುವ ಮಾಹಿತಿಯನ್ನಷ್ಟೇ ನಾವು ನೀಡಿದ್ದೇವೆ. ಅದರಲ್ಲಿ ಏನು ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಅಧಿಕಾರಿಗಳು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com