ಮಧ್ಯರಾತ್ರಿ ಕ್ಯಾಬ್ ಚಾಲಕರು ಮಹಿಳೆಯರನ್ನು ಕೆಳಗಿಳಿಸುವಂತಿಲ್ಲ: ಪೊಲೀಸ್ ಆಯುಕ್ತರ ಖಡಕ್ ಸೂಚನೆ

ಕ್ಯಾಬ್ ಡ್ರೈವರ್ ಗಳು ಕತ್ತಲಾದ ಮೇಲೆ ಮಹಿಳೆಯರನ್ನು ಮಧ್ಯೆ ದಾರಿಯಲ್ಲಿ ಇಳಿಸಿಹೋದರೆ ಅಂಥವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಎನ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕ್ಯಾಬ್ ಡ್ರೈವರ್ ಗಳು ಕತ್ತಲಾದ ಮೇಲೆ ಮಹಿಳೆಯರನ್ನು ಮಧ್ಯೆ ದಾರಿಯಲ್ಲಿ ಇಳಿಸಿಹೋದರೆ ಅಂಥವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಎನ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

 ನಾವು ಮೊದಲು ಮಹಿಳೆಯರ ರಕ್ಷಣೆ  ಆದ್ಯತೆ ನೀಡುತ್ತೇವೆ. ಕತ್ತಲಾದ ಮೇಲೆ ಮಹಿಳೆಯರನ್ನ ಮಧ್ಯೆ ದಾರಿಯಲ್ಲಿ ಇಳಿಸಿಹೋದರೆ ಅಂಥವರನ್ನು ಗುರುತಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

  
ಇತ್ತೀಚೆಗೆ ಓಲಾ ಕ್ಯಾಬ್ ಡ್ರೈವರ್​​ವೊಬ್ಬ ಕ್ಯಾಬ್​​ ಹತ್ತಿದ್ದ ಮಹಿಳೆಯನ್ನು ಆಕೆ ಸೂಚಿಸಿದ ಸ್ಥಳಕ್ಕೆ ಕರೆದೊಯ್ಯದೇ ಬೆಳಗಿನ ಜಾವ ಸುಮಾರು 3ಗಂಟೆ ವೇಳೆಗೆ ಬೇಗೂರಿನಲ್ಲಿ ಇಳಿಸಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.
  
ಕೊಲೊಂಬೋದಿಂದ ಕೆಂಪೇಗೌಡ ಇಂಟರ್​​ನ್ಯಾಷನಲ್ ಏರ್​​ಪೋರ್ಟ್​ಗೆ ಬಂದಿದ್ದ ಮಹಿಳೆಯೊಬ್ಬರು, ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಹತ್ತಿದ್ದ ಮಹಿಳೆ ನ್ಯಾಷನಲ್ ಹೈವೇ 44 ಗೆ ಕರೆದುಕೊಂಡು ಹೋಗುವಂತೆ ಡ್ರೈವರ್​​ಗೆ  ತಿಳಿಸಿದ್ದಾರೆ. ಆದರೆ, ಆಕೆಯ ಮಾತನ್ನು ಕೇಳದ ಚಾಲಕ, ಬೇಗೂರಿಗೆ ಕರೆದೊಯ್ದಿದ್ದಾನೆ. ಈ ಬಗ್ಗೆ ಮಹಿಳೆ ವಿಚಾರಿಸಿದಾಗ, ಮ್ಯಾಪ್​​ನಲ್ಲಿ ಹೇಗೆ ತೋರಿಸುತ್ತಿದೆಯೋ ಹಾಗೆ ಹೋಗುತ್ತಿದ್ದೇನೆ ಎಂದಿದ್ದಾನೆ.
  
ಕೂಡಲೇ ಮಹಿಳೆ, ಓಲಾ ಕ್ಯಾಬ್​​ನ ಎಮರ್ಜೆನ್ಸಿ ಬಟನ್ ಪ್ರೆಸ್ ಮಾಡಿದ್ದಾಳೆ. ಹೀಗಾಗಿ ಡ್ರೈವರ್ ಕ್ಯಾಬ್​​ ಅಲ್ಲೇ ನಿಲ್ಲಿಸಿ ಆಕೆಯನ್ನು ಕೆಳಗಿಳಿಯಲು ಸೂಚಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ಮಹಿಳೆ ಕೆಐಎ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com