ಬೆಂಗಳೂರು:16 ವರ್ಷದ ಬಾಲಕಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!

ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯ ತಜ್ಞರು  16 ವರ್ಷದ ಬಾಲಕಿಗೆ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ರೋಗಿಯೊಂದಿಗೆ ವೈದ್ಯರು
ರೋಗಿಯೊಂದಿಗೆ ವೈದ್ಯರು

ಬೆಂಗಳೂರು: ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯ ತಜ್ಞರು  16 ವರ್ಷದ ಬಾಲಕಿಗೆ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಿಂದ ಬಂದಿದ್ದ ರುಮಾ ಪ್ರವೀಣ್ ಎಂಬ ಬಾಲಕಿಯ ಎದೆಯಲ್ಲಿ 2 ಇಂಚಿನಷ್ಟು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಬದಲು ಕವಾಟವನ್ನು ಸರಿಪಡಿಸಬೇಕೆಂದು ಭಾವಿಸಿದ ವೈದ್ಯರು, ಸ್ವಲ್ಪ ಕಡಿಮೆ ವೆಚ್ಚದಲ್ಲಿಯೇ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಕಡಿಮೆ ರಕ್ತಸ್ರಾವವಾಗಿದೆ.  ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯ ವಾಸ್ತವ್ಯದ ಅವಧಿಯನ್ನು ಕಡಿತಗೊಳಿಸಲಾಗಿದೆ. 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಕುರಿತು ವಿವರಿಸಿದ ವೈದ್ಯರು, ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನೇ ನಡೆಸಲಾಗುತ್ತದೆ. ಅಲ್ಲದೇ, ಕವಾಟ ಬದಲಿಸುವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಈ ವಿಧಾನದಿಂದ ಮಿದುಳಿನಲ್ಲಿ ರಕ್ತಸ್ರಾವವೂ ಆಗುವ ಆಪಾಯವಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಈ ಯಾವ ಸಮಸ್ಯೆಯೂ ಆಗಲಿಲ್ಲ ಎಂದರು. 

ರಾಜ್ಯ ಹಾಗೂ ಹೊರ ರಾಜ್ಯದಲ್ಲಿನ ಸಾಮಾಜಿಕ ಹಾಗೂ ಆರ್ಥಿಕವಾಗಿ ಕೆಳಗಿರುವ ಸಹಸ್ರಾರು ರೋಗಿಗಳಿಗೆ ಈ ಶಸ್ತ್ರ ಚಿಕಿತ್ಸೆ ಅನುಕೂಲಕರವಾಗಲಿದೆ. ಈ ತಂತ್ರಜ್ಞಾನ ಮತ್ತು ಕೌಶಲ್ಯವನ್ನು  ಪಾಶ್ಚಿಮಾತ್ಯ ದೇಶಗಳೂ ಸಹ ವರ್ಗಾಯಿಸಲಾಗುತ್ತದೆ ಎಂದು ವೈದ್ಯ ತಾಮೀನ್ ಅಹ್ಮದ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com