ಪರಿಹಾರ ಪಡೆಯೋಕೆ ಜನರೇ ಬರದಿದ್ದರೆ ನಾವೇನು ಮಾಡೋಣ: ಸಚಿವ ಮಾಧುಸ್ವಾಮಿ ಪ್ರಶ್ನೆ

ನೆರೆಪರಿಹಾರ ಪಡೆಯಲು ಸಂತ್ರಸ್ಥರೆ ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಸಚಿವ ಮಾಧುಸ್ವಾಮಿ ಸಂತ್ರಸ್ತರ ಮೇಲೆ ಗೂಬೆ ಕೂರಿಸಿದ್ದಾರೆ.
ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ

ತುಮಕೂರು: ನೆರೆಪರಿಹಾರ ಪಡೆಯಲು ಸಂತ್ರಸ್ಥರೆ ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಸಚಿವ ಮಾಧುಸ್ವಾಮಿ ಸಂತ್ರಸ್ತರ ಮೇಲೆ ಗೂಬೆ ಕೂರಿಸಿದ್ದಾರೆ.
  
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಕಟ್ಟಿಕೊಳ್ಳಲು ಒಂದು ಲಕ್ಷ ರೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು 50 ಸಾವಿರ ಕೊಟ್ಟಿದ್ದೇವೆ. ಆದರೆ ಸೂಕ್ತ ದಾಖಲೆಗಳನ್ನು ಸಂತ್ರಸ್ಥರು ಸಲ್ಲಿಸದಿರುವ ಕಾರಣಪರಿಹಾರ ಹಂಚಿಕೆ ವಿಳಂಬವಾಗಿದೆ.ಸಂತ್ರಸ್ಥರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಯಾರಿಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸುವವರು ಜಿಲ್ಲಾಧಿಕಾರಿ, ತಹಶೀಲ್ದಾರ್,ವಿಭಾಗಾಧಿಕಾರಿ ಅವರನ್ನು ಭೇಟಿ ಮಾಡಿ ದಾಖಲೆಗಳನ್ನು ಸಲ್ಲಿಸಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳಿದ್ದಾರೆ.
  
ಕೇಮದ್ರ ಸರ್ಕಾರ ಈಗ ಮಧ್ಯಂತರ ಪರಿಹಾರ ಎಂದು ಹೇಳಿ 1200 ಕೋಟಿ ರೂ ಬಿಡುಗಡೆ ಮಾಡಿದೆ. ಕೇಂದ್ರದಿಂದ ಈ ಹಣವೇ ಅಂತಿಮ ಅಲ್ಲ.ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಹಾರಿದ ಅನುದಾನ ಬಿಡುಗಡೆಯಾಗಲಿದೆ ಬರಲಿದೆ ಎಂದು ಅವರು ತಿಳಿಸಿದರು.
  
ನಮ್ಮ ಸರ್ಕಾರದಿಂದ ಪರಿಹಾರಕ್ಕಾಗಿ ಕೇಂದ್ರಕ್ಕೆ ಮೋರೆ ಇಟ್ಟು ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದೇವೆ .ಈಗಾಗಲೇ ಮೂರು ಸಾವಿರ ಕೋಟಿ ಖರ್ಚು ಮಾಡಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
  
ನೆರೆಪರಿಹಾರ ಕೊಡುವುದರ ಬಗ್ಗೆ ಮಾತನಾಡಿದ ಅವರು, ಮನೆ ಕಳೆದುಕೊಂಡ ಎಲ್ಲರ ಅಕೌಂಟ್​ಗೆ ಹಣ ಹಾಕಬೇಕೆಂದರೆ,ಯಾರೂ ಸಹ ಮುಂದೆ ಬರುತ್ತಿಲ್ಲ. ಇದುವರೆಗೂ 9 ಸಾವಿರ ಸಂತ್ರಸ್ಥರಷ್ಟೇ  ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಸಮಸ್ಯೆ ಇರೋದು 40-80 ಸಾವಿರ ಮನೆಗಳಿಗೆ ಎಂದು ವರದಿ ಇದೆ. ಸಂತ್ರಸ್ಥರು ಡಿಸಿಗಳಿಗೆ ದಾಖಲೆಯೇ ಕೊಡುತ್ತಿಲ್ಲ. ಪರಿಹಾರ ಪಡೆದು ಮನೆ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ಸರ್ಕಾರ ಎಲ್ಲೂ ವಿಫಲವಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com