ಅನೈತಿಕ ಸಂಬಂಧದ ಶಂಕೆ: ಇಂಡಿಯಲ್ಲಿ ಮಾವ, ಸೊಸೆ ಬರ್ಬರ ಹತ್ಯೆ!

 ಅನೈತಿಕ ಸಂಬಂ ದಹದ ಶಂಕೆಯ ಹಿನ್ನೆಲೆಯಲ್ಲಿ ಮಾವ ಮತ್ತು ಸೊಸೆ ಬರ್ಬರ ಹತ್ಯೆಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನ ಖೇಡಗಿ ಕ್ರಾಸ್ ಬಳಿ ನಡೆದಿದೆ.

Published: 06th October 2019 01:20 PM  |   Last Updated: 06th October 2019 01:20 PM   |  A+A-


ಸಂಗ್ರಹ ಚಿತ್ರ

Posted By : raghavendra
Source : Online Desk

ವಿಜಯಪುರ: ಅನೈತಿಕ ಸಂಬಂ ದಹದ ಶಂಕೆಯ ಹಿನ್ನೆಲೆಯಲ್ಲಿ ಮಾವ ಮತ್ತು ಸೊಸೆ ಬರ್ಬರ ಹತ್ಯೆಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನ ಖೇಡಗಿ ಕ್ರಾಸ್ ಬಳಿ ನಡೆದಿದೆ.

ತಾಲೂಕಿನ  ಖೇಡಗಿ ಕ್ರಾಸ್ ಸಮೀಪದ ತೋಟದ ಮನೆಯಲ್ಲಿ ನಡೆದ ಘಟನೆಯಲ್ಲಿ ಶಿರಗೂರ ಗ್ರಾಮದ ನಿವಾಸಿಗಳು ಮಾವ ಮಾಳಪ್ಪ ಧರ್ಮಣ್ಣ ಪೂಜಾರಿ (65) ಹಾಗೂ ಸೊಸೆ ರೇಣುಕಾ ಪುಟ್ಟಣ್ಣ ಪೂಜಾರಿ (35) ಹತ್ಯೆಯಾಗಿದ್ದಾರೆ.

ರೇಣುಕಾಳ ಪತಿ ಪುಟ್ಟಣ್ಣನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ತಂದೆ ಹಾಗೂ ಪತ್ನಿ ನಡುವೆ ಅನೈತಿಕ ಸಂಬಂಧವಿದೆ ಎಂದು ಅನುಮಾನಗೊಂಡಿದ್ದ ಪುಟ್ಟಣ್ಣ  ಕಳೆದ ರಾತ್ರಿ ಈ ಜೋಡಿ ಕೊಲೆ ಮಾಡಿದ್ದಾನೆ.

ಮೃತರು ಶಿರಗೂರ ಗ್ರಾಮಸ್ಥರಾಗಿದ್ದು ಹೊಟ್ಟೆಪಾಡಿಗಾಗಿ  ಖೇಡಗಿಯ ಶ್ರೀಶೈಲ ಸೊನ್ನ ಅವರ ಹೊಲದಲ್ಲಿ ಕೆಲಸಕ್ಕಿದ್ದರು.

ಕೃತ್ಯದ ನಂತರ ಆರೋಪಿ ತಲೆಮರೆಸಿಕೊಂಡಿದ್ದು ಘಟನೆ ಸಂಬಂಧ ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp