ಲಕ್ಷ್ಮಣ ಸವದಿ ಹೇಳಿಕೆಗೆ ರೈತರ ತೀವ್ರ ವಿರೋಧ: 180 ರೂ ಸಂಗ್ರಹಿಸಿ ಉ.ಮು ಗಳಿಗೆ ಕಳುಹಿಸಿದ ರೈತರು!

ರೈತರ ಬೇಡಿಕೆಗಳಿಗೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿರುವ ಹೇಳಿಕೆಗೆ ಜನರಿಂದ ತೀವ್ರ ಟೀಕೆಗೆ ಗುರಿಯಾಗಬೇಕಾದ ಪ್ರಸಂಗ ಬಂದಿದೆ. 
ರೈತರಿಂದ ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ
ರೈತರಿಂದ ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ

ಬೆಳಗಾವಿ: ರೈತರ ಬೇಡಿಕೆಗಳಿಗೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿರುವ ಹೇಳಿಕೆ ಜನರಿಂದ ತೀವ್ರ ಟೀಕೆಗೆ ಗುರಿಯಾಗಬೇಕಾದ ಪ್ರಸಂಗ ಬಂದಿದೆ.


ಮೊನ್ನೆ ಬೆಳಗಾವಿಯಲ್ಲಿ ಸಕ್ಕರೆ ಬೆಳೆಗಾರರೊಬ್ಬರು 1 ಲಕ್ಷ  ಪರಿಹಾರ ಕೇಳಿದರು. ಆಗ ಉತ್ತರಿಸಿದ ಸವದಿ, ನನ್ನ 80 ಎಕರೆ ಸಕ್ಕರೆ ಬೆಳೆ ನಾಶವಾಗಿ ಹೋಗಿದೆ. ಅದರರ್ಥ ನಾನು 80 ಲಕ್ಷ ರೂಪಾಯಿ ಪರಿಹಾರ ಕೇಳಬೇಕು, ಅದು ಸಾಧ್ಯವಿಲ್ಲ ಅಲ್ಲವೇ ಎಂದು ಕೇಳಿದರು.


ಇದಕ್ಕೆ ನಿನ್ನೆ ವಿನೂತನ ಶೈಲಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು 180 ರೂಪಾಯಿ ಸಂಗ್ರಹಿಸಿ ಲಕ್ಷ್ಮಣ ಸವದಿಯವರಿಗೆ ಕಳುಹಿಸಿದ್ದಾರೆ. ಸವದಿ ಅವರ ಹೇಳಿಕೆಯನ್ನು ಹಸಿರು ಸೇನೆ ತೀವ್ರವಾಗಿ ಖಂಡಿಸಿದ್ದು ಇತ್ತೀಚಿನ ನೆರೆ ಪ್ರವಾಹಕ್ಕೆ ತೀವ್ರ ಸಂಕಷ್ಟಕ್ಕೀಡಾದ ರೈತರಿಗೆ ಸರ್ಕಾರ ಸಂಪೂರ್ಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.


ರೈತ ಮುಖಂಡ ಚುನ್ನಪ್ಪ ಪೂಜಾರಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ಸರ್ಕಾರ ಪ್ರತಿ ಎಕರೆಗೆ ಕೇವಲ 12 ಸಾವಿರ ರೂಪಾಯಿ ಪರಿಹಾರ ನಿಗದಿಪಡಿಸಿದೆ. ಬೇರೆ ಬೆಳೆಗಳಿಗೆ 9 ಸಾವಿರ ರೂಪಾಯಿ ಪರಿಹಾರ ನಿಗದಿಪಡಿಸಿದೆ. ಸಂಪೂರ್ಣ ಪರಿಹಾರ ನೀಡಿದರೆ ಮಾತ್ರ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಧ್ಯ ಎಂದು ಹೇಳಿದರು.


ಮತ್ತೊಬ್ಬ ರೈತ ನಾಯಕಿ ಜಯಶ್ರೀ ಗುರುನ್ನವರ್, ಸವದಿಯವರು ತಾವು ಚುನಾವಣೆ ವೇಳೆ ಅಫಿಡವಿಟ್ಟು ಸಲ್ಲಿಸುವಾಗ 44 ಎಕರೆ ಜಮೀನು ಹೊಂದಿರುವುದಾಗಿ ಪ್ರಸ್ತಾಪಿಸಿದ್ದರು. ಆದರೆ ಮೊನ್ನೆ ಶುಕ್ರವಾರ ತಾನು 80 ಎಕರೆ ಜಮೀನು ಹೊಂದಿರುವುದಾಗಿ ಹೇಳಿದ್ದಾರೆ. ಅವರಿಗೆ ರೈತರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದಾದರೆ ಉಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿ ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com