ಸ್ಕೂಟರ್ ಏರಿ ನಗರದ ರಸ್ತೆಗಳ ಪರಿಶೀಲಿಸಿದ ನೂತನ ಮೇಯರ್

ದ್ವಿಚಕ್ರ ವಾನಹದಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ವಲಯದ ಸಂಪಿಗೆ ರಸ್ತೆ, ಶ್ರೀರಾಂಪುರ ಸೇರಿದಂದೆ ನಗರದ ವಿವಿಧ ರಸ್ತೆಗಳನ್ನು ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಅವರು ಭಾನುವಾರ ತಪಾಸಣೆ ನಡೆಸಿದರು. 
ಸ್ಕೂಟರ್ ಏರಿ ನಗರದ ರಸ್ತೆಗಳ ಪರಿಶೀಲಿಸಿದ ನೂತನ ಮೇಯರ್
ಸ್ಕೂಟರ್ ಏರಿ ನಗರದ ರಸ್ತೆಗಳ ಪರಿಶೀಲಿಸಿದ ನೂತನ ಮೇಯರ್

ಬೆಂಗಳೂರು: ದ್ವಿಚಕ್ರ ವಾನಹದಲ್ಲಿ ಅನಿರೀಕ್ಷಿತವಾಗಿ ಪಶ್ಚಿಮ ವಲಯದ ಸಂಪಿಗೆ ರಸ್ತೆ, ಶ್ರೀರಾಂಪುರ ಸೇರಿದಂದೆ ನಗರದ ವಿವಿಧ ರಸ್ತೆಗಳನ್ನು ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಅವರು ಭಾನುವಾರ ತಪಾಸಣೆ ನಡೆಸಿದರು. 

ಈ ವೇಳೆ ರಸ್ತೆಯಲ್ಲಿ ಗುಂಡಿ ಹಾಗೂ ರಸ್ತೆ ಬದಿ ಬಿದ್ದಿದ್ದ ರಾಶಿ ರಾಶಿ ಕಸಗಳನ್ನು ಗಮನಿಸಿದ ಮೇಯರ್, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 

ನಿನ್ನೆ ಬೆಳಿಗ್ಗೆ 11.30ರ ಸುಮಾರಿಗೆ ಜಂಟಿ ಆಯುಕ್ತ, ಮುಖ್ಯ ಎಂಜಿನಿಯರ್ ಜೊತೆಗೆ ನಗರದ ರಸ್ತೆಗಳನ್ನು ಪರಿಶೀಲನೆ ನಡೆಸಿದರು. 

ಹಾಳು ಬಿದ್ದಿರುವ ರಸ್ತೆಗಳಲ್ಲಿ ಜನರು ದ್ವಿಚಕ್ರವಾಹನಗಳಲ್ಲಿ ಹೇಗೆ ಪ್ರಯಾಣಿಸುತ್ತಾರೆಂಬುದನ್ನು ಪರಿಶೀಲನೆ ನಡೆಸಬೇಕಿತ್ತು. ಹೀಗಾಗಿ ದ್ವಿಚಕ್ರ ವಾಹನದಲ್ಲಿ ತೆರಳಿ ಪರಿಶೀಲನೆ ನಡೆಸಿದೆ. ಜನರ ಸಮಸ್ಯೆಗಳು ಗಮನಕ್ಕೆ ಬಂದಿವೆ. ಎಲ್ಲಾ ರಸ್ತೆಗಳನ್ನೂ ಶೀಘ್ರದಲ್ಲಿಯೇ ಸರಿಪಡಿಸಲಾಗುತ್ತದೆ. ಗುರುವಾರದಿಂದಲೇ ಪ್ರತೀ ನಿತ್ಯ ನಗರ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆಂದು ಮೇಯರ್ ಗೌತಮ್ ಕುಮಾರ್ ಅವರು ಹೇಳಿದ್ದಾರೆ. 

ಮಂತ್ರಿಮಾಲ್ ನಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ ಮೇಯರ್'ಗೆ 10 ಮೀಟರ್ ಗಳ ಅಂತರದಲ್ಲಿಯೇ ಎರಡು ಗುಂಡಿಗಳು ಕಾಣ ಸಿಕ್ಕಿತ್ತು. ಈ ವೇಳೆ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್'ಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ರಸ್ತೆಗಳನ್ನು ಸರಿಪಡಿಸುವಂತೆ ಸೂಚಿಸಿದರು. 

ಇದಲ್ಲದೆ, ಸವಿತಾ ಚಿತ್ರಮಂದಿರದ ಬಳಿ ಹಲವು ಮರಗಳು ಬಿದ್ದಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಎದುರಾಗಿತ್ತು. ಇದು ಪಾದಚಾರಿಗಳಿಗೂ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿತ್ತು. ಈ ವೇಳೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಅಕ್ಟೋಬರ್ 30 ರೊಳಗಾಗಿ ರಸ್ತೆಗಳು ಗುಂಡಿ ಮುಕ್ತವಾಗಬೇಕು. ಅ.13ರೊಳಗೆ ಇನ್ನಿತರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com