ಕರ್ನಾಟಕ ಸೇರಿ ದೇಶದ ಹಲವೆಡೆ ಈರುಳ್ಳಿ ಬೆಲೆ ಇಳಿಕೆ 

ಕೇಂದ್ರ ಸರಕಾರ ತೆಗೆದುಕೊಂಡ ಹಲವು ಕಟ್ಟುಪಾಡುಗಳ ಪರಿಣಾಮ ದೆಹಲಿ ಮತ್ತು ದೇಶದ ಇತರೆ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ.

Published: 07th October 2019 02:59 PM  |   Last Updated: 07th October 2019 02:59 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : UNI

ನವದೆಹಲಿ: ಕೇಂದ್ರ ಸರಕಾರ ತೆಗೆದುಕೊಂಡ ಹಲವು ಕಟ್ಟುಪಾಡುಗಳ ಪರಿಣಾಮ ದೆಹಲಿ ಮತ್ತು ದೇಶದ ಇತರೆ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ.


ರಾಜ್ಯದಲ್ಲಿ ಈರುಳ್ಳಿ ಬೆಲೆ 35 ರಿಂದ 45 ರೂಪಾಯಿಗೆ ಕುಸಿದಿದೆ. ಒಂದು ಹಂತದಲ್ಲಿ ಕರ್ನಾಟಕದಲ್ಲಿ ಈರುಳ್ಳಿ ದರ 70 ರೂಪಾಯಿಗೆ ಏರಿಕೆಯಾಗಿತ್ತು.


ದೇಶದ ಹಲವೆಡೆ ಸೇಬು ಅಗ್ಗವಾಗಿತ್ತು. ಈರುಳ್ಳಿ ದರ ಹೆಚ್ಚಾಗಿತ್ತು. ಈರುಳ್ಳಿ ಕಾಪು ದಾಸ್ತಾನುಗಾರರ ಮೇಲೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮ ಮತ್ತು ಹೊರದೇಶಗಳಿಗೆ ರಫ್ತು ಮಾಡದಂತೆ ಹಾಕಿದ ಹಲವು ಬಿಗಿ ಕ್ರಮಗಳಿಂದ ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp