ಗ್ರಾಮೀಣ ದಸರಾದಲ್ಲಿ ಶಾಸಕ ಎನ್.ಮಹೇಶ್ ಡ್ಯಾನ್ಸ್: ವಿಡಿಯೋ ವೈರಲ್

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದ ಗ್ರಾಮೀಣ ದಸರಾ ಉತ್ಸವದಲ್ಲಿ ಶಾಸಕ ಎನ್.ಮಹೇಶ್ ಅವರು ಡ್ಯಾನ್ಸ್ ಮಾಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Published: 08th October 2019 08:39 AM  |   Last Updated: 08th October 2019 08:39 AM   |  A+A-


BSP MLA Mahesh dances joyfully on drum beats at Gramin Dasara event in Kollegal

ಗ್ರಾಮೀಣ ದಸರಾದಲ್ಲಿ ಶಾಸಕ ಎನ್.ಮಹೇಶ್ ಡ್ಯಾನ್ಸ್: ವಿಡಿಯೋ ವೈರಲ್

Posted By : Manjula VN
Source : ANI

ಕೊಳ್ಳೇಗಾರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದ ಗ್ರಾಮೀಣ ದಸರಾ ಉತ್ಸವದಲ್ಲಿ ಶಾಸಕ ಎನ್.ಮಹೇಶ್ ಅವರು ಡ್ಯಾನ್ಸ್ ಮಾಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸೋಮವಾರ ನಡೆದ ದಸರಾ ಉತ್ಸವದ ಮೇಲೆ ಎನ್.ಮಹೇಶ್ ಅವರು ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದ ಜನರ ಗಮನ ಸೆಳೆದಿದ್ದಾರೆ. 

10 ದಿನಗಳ ದಸರಾ ಉತ್ಸವ ಕೊಳ್ಳೇಗಾಲದಲ್ಲೂ ನಡೆಯುತ್ತಿದ್ದು, ಸೋಮವಾರ ಆಯುಧ ಪೂಜೆ ನಿಮಿತ್ತ ವಿಶೇಷ ಕಾರ್ಯಗಳನ್ನು ಏರ್ಪಡಿಸಲಾಗಿದ್ದು, ಉತ್ಸವಕ್ಕೆ ಆಗಮಿಸಿದ್ದ ಮಹೇಶ್ ಅವರು ಡ್ಯಾನ್ಸ್ ಮಾಡಿದ್ದಾರೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೆಗಾರ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಅವರು, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp