ದೃಷ್ಟಿ ವಿಶೇಷಚೇತನರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಬ್ರೈಲ್ ರೀಡರ್ ಅಭಿವೃದ್ದಿಪಡಿಸಿದ ಬೆಂಗಳೂರು ಐಐಐಟಿ

ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ಅಂಗೈಗೆ ಸುಲಭವಾಗಿ ಹೊಂದಿಕೊಳ್ಳುವ ನೂತ್ನ ಮಾದರಿಯ ಬ್ರೈಲ್ ರೀಡರ್ ಒಂದನ್ನು ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ-ಬಿ) ಅಭಿವೃದ್ದಿಪಡಿಸಿದೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ಅಂಗೈಗೆ ಸುಲಭವಾಗಿ ಹೊಂದಿಕೊಳ್ಳುವ ನೂತ್ನ ಮಾದರಿಯ ಬ್ರೈಲ್ ರೀಡರ್ ಒಂದನ್ನು ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ-ಬಿ) ಅಭಿವೃದ್ದಿಪಡಿಸಿದೆ. ಈ ಹೊಸ ಉಪಕರಣದ ಸಹಾಯದೊಡನೆ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳು ಮ್ಮ ಕಲಿಕೆಯ ಅನುಭವವನ್ನು ಇನ್ನಷ್ಟು ಸರಳಗೊಳಿಸಿಕೊಳ್ಳುವ ಸಾಧ್ಯತೆ ಇದೆ.

ಈ ಉಪಕರಣ ಮುಂದಿನ ಆರು ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು ವಿಶ್ವದ ದೃಷ್ಟಿ ವಿಶೇಷಚೇತನರ ನಾಲ್ಕನೇ ಒಂದು ಭಾಗ ನೆಲೆಸಿರುವ ಭಾರತ ದೇಶದಲ್ಲಿ ಅಂತಹ ಉತ್ಪನ್ನವನ್ನು ಅಭಿವೃದ್ಧಿಪಡಿಸಿರುವುದುತಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೈಗೆಟುಕುವ ಬ್ರೈಲ್ ತಂತ್ರಜ್ಞಾನ ದೊರಕಲು ಸಹಾಯವಾಗಲಿದೆ. ಐಐಐಟಿ-ಬಿಭಾರತದ ಅಗ್ಗದ ರಿಫ್ರೆಶ್ ಮಾಡಬಹುದಾದ ಬ್ರೈಲ್ ರೀಡರ್ (ಆರ್ಬಿಡಿ) ಅಥವಾ ಕಿಂಡಲ್ ತರಹದ ಸಾಧನವನ್ನು ಅಭಿವೃದ್ದಿಪಡಿಸುತ್ತಿದೆ.ಇದರ ಮೂಲಮಾದರಿಯನ್ನು ಮರು-ವಿನ್ಯಾಸಗೊಳಿಸಲಾಗಿದ್ದು, ಬೆಲೆ ಸುಮಾರು 15,000-20,000 ರು.ಗಳಿರಲಿದೆ.

ಪಠ್ಯಪುಸ್ತಕಗಳು, ಕಥೆಗಳು ಮತ್ತು ಗ್ರಾಫಿಕ್ಸ್‌ನೊಂದಿಗೆ ಲೋಡ್ ಆಗಿರುವ 8 ಜಿಬಿ ಯುನಿಟ್ ಅನ್ನು ಒಂದರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದಾಗಿದೆ. ಇದಲ್ಲದೆ ವರ್ಷಾಂತಕ್ಕೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯ, ದತ್ತಾಂಶಗಳನ್ನು ಅಪ್ಲಿಕೇಷನ್ ಬಳಸಿ ಡೆವಲಪ್ ಮಾಡಲು ಇದರಲ್ಲಿ ಅವಕಾಶವಿರಲಿದೆ. ಸಂಸ್ಥೆಯು ಈ ವಿಶೇಷ ಸಾಧನವನ್ನು ಅಭಿವೃದ್ದಿಪಡಿಸಲು ಟಚ್‌ಟೆಕ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಐಟಿ ಸಂಸ್ಥೆ ಹಾಗೂ  ವಿಷನ್ ಎಂಪವರ್‌ ಎಂಬ ಎನ್‌ಜಿಒ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮುಖ್ಯಸ್ಥರಾದ ಐಐಐಟಿ-ಬಿ ಯ ಪ್ರಾದ್ಯಾಪಕ ಸದಸ್ಯ ಸುಜಿತ್ ಕುಮಾರ್ ಚಕ್ರವರ್ತಿ, “ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳು ಲಭ್ಯವಿರುವ ಬ್ರೈಲ್ ರೀಡರ್ ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಮೂಲತಃ ಟಚ್‌ಟೆಕ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನ ಪಾಲ್ ಡಿ ಸೋಜಾ ಅವರು ಅಭಿವೃದ್ಧಿಪಡಿಸಿದ ಉತ್ಪನ್ನವನ್ನು ಮರು-ವಿನ್ಯಾಸಗೊಳಿಸಬೇಕಾಗಿತ್ತು ಮತ್ತು ಅದನ್ನು ಹೆಚ್ಚು ಪೋರ್ಟಬಲ್ ಮತ್ತು ಅಗ್ಗವಾಗಿನಿರ್ಮಿಸಬೇಕಾಗಿತ್ತು ಇಂತಹಾ ಉತ್ಪನ್ನಗಳ ಬೆಲೆ ಸಾಮಾನ್ಯವಾಗಿ ತುಟ್ಟಿಯಾಗಿರಲಿದೆ.ಅಲ್ಲದೆ ದೊಡ್ಡ ಪ್ರಮಾಣದ  ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಈ ಬೆಲೆ ಹೆಚ್ಚಳಕ್ಕೆ ಕಾರಣ.ಅದಕ್ಕಾಗಿ ನಾವು ಮೊದಲಿಗೆ ಅತ್ಯಾಧುನಿಕ ಯಂತ್ರಾಂಶ ಬಳಸಿ  ಬೆಲೆಯನ್ನು ತಗ್ಗಿಸಲು ಸರಳವಾದ ಕ್ರಮಾವಳಿಗಳನ್ನು ಪರಿಚಯಿಸಬೇಕು.ಪ್ರಸ್ತುತ, ಮೂಲಮಾದರಿಗಳು ಸಮೀಕ್ಷೆಗೆ ಹೋಗಿದ್ದು ವಿಷನ್ ಎಂಪವರ್ ಮೂಲಕ, ಪ್ರಾಯೋಗಿಕ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕಿದೆ" ಎಂದಿದ್ದಾರೆ.

ಇನ್ನು ಯಾವುದೇ ದೋಷಗಳ ಪತ್ತೆಗಾಗಿ ಈ ಸಾಧನವನ್ನು ಪರೀಕ್ಷಿಸಲು ಕೃತಕ ಬುದ್ಧಿಮತ್ತೆ ಬೆಂಬಲಿತ ತಂತ್ರಜ್ಞಾನ ಬಳಸಿ ಪರಿಶೀಲಿಸಲಾಗುತ್ತಿದೆ.ಈ ಸಾಧನವನ್ನು 10 ವರ್ಷಗಳ ಹಿಂದೆ ಪಾಲ್ ಡಿಸೋಜಾ ಅಭಿವೃದ್ಧಿಪಡಿಸಿದರು, ಆದರೆ ಹಣದ ಕೊರತೆಯಿಂದಾಗಿ, ಉತ್ಪನ್ನವನ್ನುಮಾರುಕಟ್ಟೆಗೆ ತರಲಾಗಿರಲಿಲ್ಲ. ಡಿ'ಸೋಜಾ 2010 ರಲ್ಲಿ ಸರ್ಕಾರದ ಅನುದಾನಕ್ಕಾಗಿ ಅರ್ಜಿ ಹಾಕಿದ್ದರು. ಅವರು  10 ಮೂಲಮಾದರಿಗಳನ್ನು ಉತ್ಪಾದಿಸಿದರು "ಸಾಧನವನ್ನು ಹೆಚ್ಚು ಕೈಗೆಟುಕುವ ಮತ್ತು ಪೋರ್ಟಬಲ್ ಮಾಡಲು ನಾನು ಕೆಲಸ ಮಾಡಿದ ಯುಎಸ್ ಮೂಲದ ಸಂಸ್ಥೆಯಾದ ಸೇಪಿಯಂಟ್ ಜೊತೆ ಸಹಕರಿಸಿದ್ದೇನೆ. ನಂತರ,ಎನ್‌ಜಿಒ ವಿಷನ್ ಎಂಪವರ್ ನನ್ನನ್ನು ಸಂಪರ್ಕಿಸಿತು ಮತ್ತು ನಂತರ ನಾವು ಐಐಟಿ-ಬಿ ಯಲ್ಲಿ ಪ್ರಾದ್ಯಾಪಕರ ಸಹಾಯವನ್ನು ಪಡೆದುಕೊಂಡಿದ್ದೇವೆ ”ಎಂದು ಡಿಸೋಜಾ ಹೇಳಿದರು.ಕರ್ನಾಟಕದ ಶಾಲೆಗಳಾದ್ಯಂತ ದೃಷ್ಟಿವಿಶೇಷ ಚೇತನ  ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ವಿಷನ್ ಎಂಪವರ್‌ನ ರಾಜಗೋಪಾಲ್, ಬ್ರೈಲ್ ಪುಸ್ತಕಗಳು ತುಂಬಾ ದುಬಾರಿಯಾಗಿದೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಿಲ್ಲ. ಆದ್ದರಿಂದ, ಅಂತಹ ತಂತ್ರಜ್ಞಾನದ ಅಭಿವೃದ್ಧಿ ಹೆಚ್ಚು ಅಗತ್ಯವಾಗಿದೆ ಎನ್ನುತ್ತಾರೆ.

“ಭಾರತೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಬ್ರೈಲ್ ತಂತ್ರಜ್ಞಾನವು ವಯಸ್ಕರನ್ನು ಗುರಿಯಾಗಿಸಿಕೊಂಡಿದೆ. ಮತ್ತು ಅಂತಹ ಸಾಧನಗಳು ವೈಫೈ ಸಂಪರ್ಕ ಮತ್ತು ಇತರ ಅವಶ್ಯಕತೆಗಳನ್ನು ಹೊಂದಿದ್ದು ಅದು ವಿದ್ಯಾರ್ಥಿಗಳಿಗೆಅನುಕೂಲವಲ್ಲ. ಕಥೆ ಪುಸ್ತಕಗಳಿಂದ ಹಿಡಿದು  ಉತ್ಪನ್ನದಲ್ಲಿ ಬಹು ಆಯ್ಕೆಯ ಪ್ರಶ್ನೆಗಳವರೆಗೆ ನಾವು ಎಲ್ಲವನ್ನೂ ಲೋಡ್ ಮಾಡಿದ್ದೇವೆ. ನಾವು ಉತ್ಪನ್ನಗಳನ್ನು ಪೈಲಟ್ ಪ್ರಾಜೆಕ್ಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ನೀಡಿದ್ದೇವೆ ಮತ್ತು ಪ್ರತಿಕ್ರಿಯೆ ಅದ್ಭುತವಾಗಿದೆ ”ಎಂದು ರಾಜಗೋಪಾಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com