ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಾಳಿ: ಗಾಂಜಾ, ಚಾಕು, ಕಠಾರಿಗಳು ವಶ

ನಗರದ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ಬುಧವಾರ ಏಕಾಏಕೀ​ ದಾಳಿ ನಡೆಸಿ, 37 ಚಾಕು, ಗಾಂಜಾ ಹಾಗೂ ಗಾಂಜಾ ಸೇದುವ ಪೈಪ್​, ಕತ್ತಿ, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲು
ಪರಪ್ಪನ ಅಗ್ರಹಾರ ಜೈಲು

ಬೆಂಗಳೂರು: : ನಗರದ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ಬುಧವಾರ ಏಕಾಏಕೀ​ ದಾಳಿ ನಡೆಸಿ, 37 ಚಾಕು, ಗಾಂಜಾ ಹಾಗೂ ಗಾಂಜಾ ಸೇದುವ ಪೈಪ್​, ಕತ್ತಿ, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ, 37 ಚಾಕು/ಡ್ರ್ಯಾಗರ್​​ಗಳು, ಗಾಂಜಾ ಹಾಗೂ ಗಾಂಜಾ ಸೇದುವ ವಸ್ತು​ಗಳ ಜೊತೆಗೆ ಕೈದಿಗಳು ಅಕ್ರಮವಾಗಿ ಬಳಸುತ್ತಿದ್ದ ಮೊಬೈಲ್​ ಹಾಗೂ ಸಿಮ್​ ಕಾರ್ಡ್​​ಗಳನ್ನು ಜಪ್ತಿ ಮಾಡಿದ್ದಾರೆ.

ಪರಿಶೀಲನೆ ಮುಗಿದ ನಂತರ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ ಮೇರೆಗೆ ಬೆಳಗ್ಗೆ ಕಾರಾಗೃಹದ ಮೇಲೆ ದಾಳಿ ನಡೆಸಲಾಯಿತು ಎಂದು ತಿಳಿಸಿದರು.

ಪ್ರತಿ ಬ್ಯಾರಕ್ ನಲ್ಲಿಯೂ ತಪಾಸಣೆ ಮಾಡಲಾಗಿದ್ದು, ಈ ವೇಳೆ ಕೈದಿಗಳಿಂದ 37 ಚಾಕು/ಡ್ರ್ಯಾಗರ್​​ಗಳು, ಗಾಂಜಾ ಹಾಗೂ ಗಾಂಜಾ ಸೇದುವ ವಸ್ತು​ಗಳ ಜೊತೆಗೆ ಅಕ್ರಮವಾಗಿ ಬಳಸುತ್ತಿದ್ದ ಮೊಬೈಲ್​ ಹಾಗೂ ಸಿಮ್​ ಕಾರ್ಡ್​​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕೈದಿಗಳು ಜೈಲಿನಲ್ಲಿದ್ದುಕೊಂಡೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ತನಿಖೆಯ ಹಿತದೃಷ್ಟಿಯಿಂದ ಕೆಲವು ವಿಷಯಗಳನ್ನು ಗೌಪ್ಯವಾಗಿಡಬೇಕಾಗುತ್ತದೆ. ಜೈಲು ಮೇಲ್ವಿಚಾರಕರು ಪರಿಶೀಲನೆ ವೇಳೆ ಜೊತೆಗಿದ್ದರು. ಅವರಿಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ಕೆಲ ದಿನಗಳ ಹಿಂದೆ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ಸಾವನ್ನಪಿದ್ದು ಇದಕ್ಕೆ ಅಕ್ರಮ ಚಟುವಟಿಕೆಗಳೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಜೈಲಿನಲ್ಲಿರುವ ಕೈದಿಗಳಿಗೆ ಸಂಬಂಧಿಕರು ಊಟ, ಹಣ್ಣು ಹಂಪಲು ಕಳುಹಿಸುವಾಗ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಗಾಂಜಾ ಕಳುಹಿಸಲಾಗುತ್ತದೆ ಎನ್ನುವ ಮಾಹಿತಿಯಿದ್ದು ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದ ನಡೆದಿರುವ ದಾಳಿಯು ಸಂಜೆಯವರೆಗೆ ಮುಂದುವರೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com