ಹಾಸನ: ಮೂವರು ಯುವಕರು ಹೇಮಾವತಿ ನದಿಪಾಲು

ಮೂವರು ಯುವಕರು ಹೇಮಾವತಿ ನದಿಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಣಸವಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Published: 09th October 2019 12:31 AM  |   Last Updated: 09th October 2019 12:31 AM   |  A+A-


Three boys drown in Hemavathi river in Hassan

ಯುವಕರು ಹೇಮಾವತಿ ನದಿಪಾಲು

Posted By : Srinivasamurthy VN
Source : UNI

ಹಾಸನ: ಮೂವರು ಯುವಕರು ಹೇಮಾವತಿ ನದಿಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಣಸವಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ರಥನ್ (22), ಭೀಮ್‌ರಾಜ್ (27) ಮತ್ತು ಮನು (27) ಎಂಬವರು ಪವಿತ್ರ ಸ್ಥಾನಕ್ಕಾಗಿ ಹೇಮಾವತಿ ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ನದಿಯಲ್ಲಿ ಭಾರೀ ಒಳಹರಿವು ಇದ್ದುದರಿಂದ ಅವರು ನೀರಿನಲ್ಲಿ ಕೊಚ್ಚಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರತ್ಯಕ್ಷ ದರ್ಶಿಗಳು ತಿಳಿಸಿರುವಂತೆ ಮೊದಲು ರತನ್ ನೀರಿಗೆ ಧುಮುಕಿದ್ದು, ನಂತರ ಆತನನ್ನು ಹಿಂಬಾಲಿಸಿ ಭೀಮರಾಜ್ ಮತ್ತು ಮನು ಹೋಗಿದ್ದಾರೆ. ನದಿಯ ನೀರು ರಭಸದಿಂದ ಹರಿಯುತ್ತಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp