ಕಲಬುರಗಿ: ಇಬ್ಬರು ಯುವಕರು ನೀರು ಪಾಲು

ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

Published: 09th October 2019 06:36 PM  |   Last Updated: 09th October 2019 06:36 PM   |  A+A-


drown-river

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಕಲಬುರಗಿ: ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಅಕ್ಕಪಕ್ಕ ಮನೆಯ 19 ವರ್ಷದ ಗಣೇಶ್ ಮತ್ತು 18 ವರ್ಷದ ಗೋಪಾಲ್ ಮೃತ ದುರ್ದೈವಿಗಳು. 

ದಸರಾ ಹಬ್ಬದ ಪ್ರಯುಕ್ತ ಒಂಭತ್ತು ದಿನಗಳ ಕಾಲ ಸಸಿಗಳನ್ನು ಬೆಳೆಸಿ, ಇಂದು ವಿಸರ್ಜನೆ ಮಾಡಲು ಗ್ರಾಮದ ಹೊರವಲಯದ ಕೆರೆಗೆ ಗಣೇಶ್ ಮತ್ತು ಗೋಪಾಲ್ ತೆರಳಿದ್ದರು. ಈ ವೇಳೆ ಇಬ್ಬರು ಕಾಲು ಜಾರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸಸಿ ವಿಸರ್ಜಿಸಲು ಹೋದ ಯುವಕರು ತುಂಬಾ ಹೊತ್ತಾದರೂ ಮನೆಗೆ ಮರಳದಿದ್ದಕ್ಕೆ, ಆತಂಕಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಅವರಿಬ್ಬರೂ ಕಾಣಿಸದಿದ್ದಾಗ, ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಗಣೇಶ್ ಮತ್ತು ಗೋಪಾಲ ಅವರ ಮೃತದೇಹಗಳು ಪತ್ತೆಯಾಗಿವೆ.
 

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp