ಕನ್ನಡದಲ್ಲಿ ದೊಡ್ಡ ನಾಮಫಲಕ ಇದ್ದರೆ ಮಾತ್ರ ಪರವಾನಗಿ: ನೂತನ ಮೇಯರ್

ಕನ್ನಡಿಗೇತರರನ್ನು ಮೇಯರ್ ಮಾಡಲಾಗಿದೆ ಎಂದು ಜರಿದಿದ್ದವರಿಗೆ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಪ್ರಬಲ ಸಂದೇಶ ರವಾನಿಸಿದ್ದಾರೆ.
ಗೌತಮ್ ಕುಮಾರ್ ಜೈನ್
ಗೌತಮ್ ಕುಮಾರ್ ಜೈನ್

ಬೆಂಗಳೂರು:  ಕನ್ನಡಿಗೇತರರನ್ನು ಮೇಯರ್ ಮಾಡಲಾಗಿದೆ ಎಂದು ಜರಿದಿದ್ದವರಿಗೆ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಪ್ರಬಲ ಸಂದೇಶ ರವಾನಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಮತ್ತಿತರ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ಫಲಕಗಳಿದ್ದರೆ ಮಾತ್ರ ಉದ್ಯಮಗಳಿಗೆ ಪರವಾನಗಿ  ನೀಡುವುದಾಗಿ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ,..

ಯಾವುದೇ ಹೊಸ ಉದ್ಯಮಗಳ ಬೋರ್ಡ್​​ ಗಳಲ್ಲಿ ಕನ್ನಡವಿದ್ದರೆ ಮಾತ್ರ ಟ್ರೇಡ್ ಲೈಸೆನ್ಸ್ ನೀಡಲು ನಿರ್ಧರಿಸಿದ್ದು, ಉದ್ದಿಮೆ ಪರವಾನಿಗೆ ಕನ್ನಡ ಕಡ್ಡಾಯ ಇರಬೇಕು. ಬೋರ್ಡ್ ನಲ್ಲಿ ದೊಡ್ಡ ಅಕ್ಷರಗಳಲ್ಲಿ ಕನ್ನಡವಿರಬೇಕು ಅದನ್ನು ಸ್ಪಷ್ಟಪಡಿಸಿಕೊಂಡೇ ಟ್ರೇಡ್ ಲೈಸೆನ್ಸ್ ನೀಡುವಂತೆ ಕಟ್ಟಪ್ಪಣೆ ಹೊರಡಿಸಲಾಗುವುದು.

ನವೆಂಬರ್ ತಿಂಗಳಾದ್ಯಂತ ಕನ್ನಡ ನಾಮಫಲಕಗಳ ಅಳವಡಿಕೆಗೆ ನಿರ್ಧರಿಸಲಾಗಿದೆ. ಕಂಪನಿಯ ಹೆಸರಿಗೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಾಮಫಲಕಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ. ಆದೇಶ ಪಾಲನೆ ಮಾಡದಿರುವವರ ಪರವಾನಿಗೆಯನ್ನು ರದ್ದು ಮಾಡಲಾಗುತ್ತದೆ. ಈ ಬಗ್ಗೆ ನವೆಂಬರ್ 1 ರಿಂದಲೇ ಜಾರಿಗೊಳಿಸಲು ಆಲೋಚನೆ ಮಾಡಲಾಗಿದೆ ಎಂದು ನ್ಯೂಸ್18 ಕನ್ನಡಕ್ಕೆ ಮೇಯರ್ ಗೌತಮ್ ಕುಮಾರ್ ಜೈನ್​​​​​ತಿಳಿಸಿದ್ದಾರೆ.

2017ರಲ್ಲಿ ಸುತ್ತೋಲೆ ಹೊರಡಿಸಿದ್ದ ಬಿಬಿಎಂಪಿ ನಾಮಫಲಕದಲ್ಲಿ ಶೇ.60 ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಟ್ಟಿರಬೇಕೆಂದು ತಿಳಿಸಿತ್ತು. ಕನ್ನಡಕ್ಕೆ ಆದ್ಯತೆ ನೀಡದಿದ್ದ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡುವುದಾಗಿ ತಿಳಿಸಿತ್ತು.

ಈ ಸುತ್ತೋಲೆಯನ್ನು ಪ್ರಶ್ನಿಸಿ ಕೆಲ ಅಂಗಡಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಿಬಿಎಂಪಿ ಸುತ್ತೋಲೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಆದೇಶ ಪಾಲಿಸಲು ಯಾವುದೇ ರೀತಿಯ ಕಾನೂನುಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು ಅಲ್ಲದೆ, ಆದೇಶ ಅಸಾಂವಿಧಾನಿಕ ಎಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com