ಯಡಿಯೂರಪ್ಪ
ಯಡಿಯೂರಪ್ಪ

ವಿಧಾನಸಭೆ: 7927 ಕೋಟಿ ರೂ. ಪೂರಕ ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪ

7927.23 ಕೋಟಿ ರೂಪಾಯಿ 2019-20ನೇ ಸಾಲಿನ ಪೂರಕ ಅಂದಾಜಿನ ಎರಡನೆ ಕಂತನ್ನು ಅಂಗೀಕರಿಸುವಂತೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ವಿಧಾನ ಸಭೆಯಲ್ಲಿ ಮಂಡಿಸಿದರು.

ಬೆಂಗಳೂರು: 7927.23 ಕೋಟಿ ರೂಪಾಯಿ 2019-20ನೇ ಸಾಲಿನ ಪೂರಕ ಅಂದಾಜಿನ ಎರಡನೆ ಕಂತನ್ನು ಅಂಗೀಕರಿಸುವಂತೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ವಿಧಾನ ಸಭೆಯಲ್ಲಿ ಮಂಡಿಸಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಅರ್ಹ ರೈತರಿಗೆ ಸಹಾಯ ಧನ ನೀಡಲು 1000 ಕೋಟಿ ರೂ ಜೊತಗೆ 489.14 ಕೋಟಿ ರೂಪಾಯಿ ಮರು ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.ಇದರ ಜೊತೆಗೆ ಯೋಜನೆ ಅನುಷ್ಠನಕ್ಕಾಗಿ 1500 ಕೋಟಿ ರೂಗಳನ್ನ ಒದಗಿಸಲಾಗಿದೆ. ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಸ್ತರಣೆ ತಂತ್ರಜ್ಞಾನ ತರಬೇತಿ ಯೋಜನೆ ಅಡಿಯಲ್ಲಿ ರಾಜ್ಯದ ಪಾಲು 5.20 ಕೋಟಿ ರೂ ಗಳನ್ನು ಬಿಡುಗಡೆ ಜೊತೆಗೆ ಹೆಚ್ಚುವರಿಯಾಗಿ 27.22 ಕೋಟಿ ರೂ ವೆಚ್ಚ ಮಾಡಲು ಕೃಷಿ ಇಲಾಖೆಗೆ ಬಿಡುಗಡೆ ಮಾಡಲು ಕೋರಲಾಗಿದೆ.

ರಸಗೊಬ್ಬರ ಮತ್ತು ಕಾಪು ದಾಸ್ತಾನಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಲಕ್ಕೆ 8.11 ಕೋಟಿ ರೂ ಒದಗಿಸುವುದರ ಜೊತೆಗೆ ಜಾನುವಾರು ಗಣತಿಗಾಗಿ 8.96 ಕೋಟಿ ರೂ ಹಾಗೂ ಹಿಂದಿನ ವರ್ಷದ ಬಾಕಿ ವೇತನಕ್ಕಗಿ 3.72 ಕೋಟಿ ರೂ ಬಿಡುಗಡೆ ಮಾಡಲು ಉಲ್ಲೇಖಿಸಲಾಗಿದೆ.

ಅಬಕಾರಿ ಇಲಾಖೆಗೆ ಹೊಸ ವಾಹನ ಖರೀದಿಗೆ 7.77 ಕೋಟಿ ರೂ ಹಾಗೂ ನೇರ ವರ್ಗಾವಣೆ ಕಮಿಷನ್ ಪಾವತಿಸಲು 20ಕೋಟಿ ರೂ. ವಿಧಾನ ಸಭಾ ಚುನಾವಣೆಯಲ್ಲಿ ಆಗಿರುವ ವೆಚ್ಚಕ್ಕೆ ವಿವಿಧ ಬಾಬತ್ತಿನಲ್ಲಿ 15 ಕೋಟಿ ರೂ, ಹಾಗೂ ಬಿಎಲ್ ಸಂಸ್ಥೆಗೆ 1.83 ಲಕ್ಷ, ಲೋಕಾಯುಕ್ತ ಸಂಸ್ಥೆಯಲ್ಲಿ ಗುತ್ತಿಗೆ ನೌಕರರ ವೇತನ ವೆಚ್ಚಕ್ಕಾಗಿ 73 ಲಕ್ಷ, ಲೋಕಾಯುಕ್ತ ಸಂಸ್ಥೆಗೆ ತನಿಖಾ ಘಟಕಕ್ಕೆ ಸಾರಿಗೆ ವೆಚ್ಚ 1.79 ಕೋಟಿ ರೂ ಪಾವತಿಸಲು ಮತ್ತು ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ 2.86 ಕೋಟಿ ರೂ ಒದಗಿಸಲು ಪೂರಕ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.

ಮಳೆಯಿಂದಾಗಿ ಭಾರಿ ಹಾನಿಯಾಗಿರುವ ಗ್ರಾಮೀಣ ರಸ್ತೆಗಳು, ಸೇತುವೆಗಳ ಪುನರ್ ಸ್ಥಾಪನೆ, ಮರು ನಿರ್ಮಾಣ, ನವೀಕರಣಕ್ಕೆ 1500 ಕೋಟಿ ರೂ ಪಾವತಿಸಲು ಪೂರಕ ಅಂದಾಜಿನಲ್ಲಿ ಕೋರಲಾಗಿದೆ.

ಚಾಮರಾಜನಗರದ ತಾಲೂಕಿನ ತೆಂಗು ಬೆಳಗಾರರ ಸಂಸ್ಕರಣ ಮತ್ತು ಮಾರಾಟ ಸಂಘಕ್ಕೆ 3 ಕೋಟಿ ರೂ, ಪ್ರಕೃತಿ ವಿಕೋಪಕ್ಕೆ ತುತ್ತಾದ ವಿವಿಧ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿ ಕೈಗೆತ್ತಿ ಕೊಳ್ಳಲು 500 ಕೋಟಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿ 1529.39 ಕೋಟಿ ರೂ ವಿನಿಯೋಗಿಸಲು ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ರಿಸರ್ವೆ ಬ್ಯಾಂಕಿನಿಂದ ಸಾಲ ಪಡೆದಿದ್ದು, ಸಾಲದ ಮೇಲಿನ ಬಡ್ಡಿ, ಹಾಗೂ ಮರು ಹೊಂದಾಣಿಕೆ ಮೊತ್ತ ಪಾವತಿ ಮಾಡಲು 310.49 ಕೋಟಿ ರೂ. ಅನ್ನು ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ. ಖಾಲಿ ಹುದ್ದೆ ಭರ್ತಿ ಹಾಗೂ ಹಿಂದಿನ ವರ್ಷದ ಬಾಕಿ ವೇತನ ಕೊರತೆ ಸರಿದೂಗಿಸಲು 28.09 ಕೋಟಿರೂ ಅಭಿಯಾಚನೆ ಅಡಿಯಲ್ಲಿ ಸೇರಿಸಲಾಗಿದೆ. 

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚುವರಿ ಕಾಮಗಾರಿಗಳಿಗೆ 15 ಕೋಟಿರೂ ಒದಗಿಸಲು ಅಭಿಯಾಚನೆಯಲ್ಲಿ ಸೇರಿಸಲಾಗಿದೆ. ಮೈಸೂರು ದಸರಾ ಆಚರಣೆಗೆ ಹೆಚ್ಚುವರಿಯಾಗಿ 10.41 ಕೋಟಿರು ಅನುದಾನ ನೀಡಲು ಕೋರಲಾಗಿದೆ. ನ್ಯಾಷನಲ್ ಆಯುಷ್ ಮಿಷನ್ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾದ 35.67 ಕೋಟಿ ರೂ ಒದಗಿಸಲಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ 2ನೇ ಸಮವಸ್ತ್ರ ವಿತರಿಸಲು 94.00 ಕೋಟಿ ರೂ ಒದಗಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com