ಚಲಿಸುತ್ತಿದ್ದ ಕಾರಿನಿಂದ ಬಿದ್ದ ಮಗು; ಬಲೂನ್‌ನಿಂದಾಗಿ ಉಳಿಯಿತು ಮಗುವಿನ ಪ್ರಾಣ, ಸಿಸಿಟಿವಿಯಲ್ಲಿ ಸೆರೆ!

ಚಲಿಸುತ್ತಿದ್ದ ಕಾರಿನಿಂದ ಮಗು ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಡಗು: ಚಲಿಸುತ್ತಿದ್ದ ಕಾರಿನಿಂದ ಮಗು ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಪೋಕ್ಲು ಪಟ್ಟಣದಲ್ಲಿ ಅಕ್ಟೋಬರ್ 7 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೂರು ವರ್ಷದ ಮಗುವೊಂದು ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದಿದ್ದೆ. ಮಗುವಿನ ಕೈಯಲ್ಲಿ ಬಲೂನ್ ಇದ್ದ ಕಾರಣ ಗಾಯಗಳಾಗಿಲ್ಲ. ಮಗು ಬೀಳುವಾಗ  ಬಲೂನ್ ಮೊದಲು ನೆಲಕ್ಕೆ ತಗುಲಿದ್ದು, ಇದರಿಂದ ಮಗುವಿಗೆ ಹೆಚ್ಚಿನ ಗಾಯಗಳಾಗಿಲ್ಲ.

ಯುವತಿಯೋರ್ವಳು  ಕಾರು ಚಲಾಯಿಸುತ್ತಿದ್ದು, ಘಟನೆಯ ನಂತರ ಕಾರು ನಿಲ್ಲಿಸಿ ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದು, ಕಾರಿನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com