ದಾಖಲೆ ನೋಡದೆ ಅಕ್ರಮವಾಗಿ ಖಾತಾ ಮಾಡಿಕೊಟ್ಟ 3 ಅಧಿಕಾರಿಗಳ ಅಮಾನತು!

ದಾಖಲೆ ನೋಡದೆ ಅಕ್ರಮವಾಗಿ ಖಾತಾ ಮಾಡಿಕೊಟ್ಟು ಲೋಪ ಎಸಗಿದ ಐವರು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಾಖಲೆ ನೋಡದೆ ಅಕ್ರಮವಾಗಿ ಖಾತಾ ಮಾಡಿಕೊಟ್ಟು ಲೋಪ ಎಸಗಿದ ಐವರು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. 

ಅಮಾನಿ ಬೆಳ್ಳಂದೂರು ಗ್ರಾಮದಲ್ಲಿ ಭೂ ಪರಿವರ್ತನೆಗೆ ಒಳಪಡದ 32.27 ಎಕರೆ ಆಸ್ತೆಯನ್ನು ಸ್ಟೆರ್ಲಿಂಗ್ ಹಬ್ರನ್ ಇನ್ ಫ್ರಾಪ್ರಾಜೆಕ್ಟ್ ಸಂಸ್ಥೆಗೆ ಕಾನೂನು ಬಾರಿಹವಾಗಿ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 

ಹೂಡಿ ಉಪ ವಿಭಾಗದ ಕಂದಾಯ ಪರಿವೀಕ್ಷಕ ಲೋಕೇಶ್ ಬಾಬೂ, ಹೂಡಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೊಡ್ಡ ಶಾಮಚಾರಿ, ಯಲಹಂಕ ವಿಭಾಗದ ಕಂದಾಯ ಅಧಿಕಾರಿ ಕೆಂಪರಂಗಯ್ಯ ಅಮಾನತುಗೊಂಡ ಅಧಿಕಾರಿಗಳಾಗಿದ್ದು, ಉಪ ಆಯುಕ್ತ ಶಿವೇಗೌಡ, ಜಂಟಿ ಆಯುಕ್ತ ಜಗದೀಶ್ ವಿರುದ್ಧವೂ ಬಿಬಿಎಂಪಿ ಕ್ರಮ ಕೈಗೊಂಡಿದೆ. 

ಪ್ರಕರಣ ಸಂಬಂಧ ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಆಯುಕ್ತರು ಸಲ್ಲಿಸಿರುವ ವರದಿ ಆಧರಿಸಿ ಈ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 

ಇನ್ನು ಈ ಅಧಿಕಾರಿಗಳು ನೀಡಿದ ದಾಖಲೆಗಳನ್ನು ಪರಿಶೀಲನೆ ಮಾಡದೇ ಅನುಮೋದನೆ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಎರವಲು ಸೇವೆ ಮೇಲೆ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್.ಆರ್.ನಗರ ವಲಯದ ಉಪ ಆಯುಕ್ತ ಶಿವೇಗೌಡ ಹಾಗೂ ಮಹದೇವಪುರದ ಜಂಟಿ ಆಯುಕ್ತ ಜಗದೀಶ್ ಅವರನ್ನು ಮಾತೃ ಇಲಾಖೆಗೆ ಹಿಂತಿರುಗಿಸಲು ಆಯುಕ್ತರು ಸೂಚನೆ ನೀಡಿದ್ದಾರೆ. 

ಸ್ಟೆರ್ಲಿಂಗ್ ಹರ್ಬನ್ ಇನ್ ಫ್ರಾ ಪ್ರಾಜೆಕ್ಟ್ಸ್ ಸಂಸ್ಥೆಯ ನಿರ್ದೇಶಕ ಶಂಕರ್ ಶಾಸ್ತ್ರಿ ಅಮಾನಿ ಬೆಳ್ಳಂದೂರು ಖಾನೆಯ ಗ್ರಾಮಕ್ಕೆ ಸೇರಿದ ವಿವಿಧ ಸರ್ವೆ ಸಂಖ್ಯೆಯಲ್ಲಿ ಬರುವ ಒಟ್ಟು 33,31 ಎಕರೆಯಲ್ಲಿ 1.4 ಎಕರೆ ಖರಾಬು ಹೊರತು ಪಡಿಸಿ ಉಳಿದ 32.27 ಎಕರೆ ಸ್ವತ್ತಿಗೆ ಬಿಡಿಎಯಿಂದ ಅಬಿವೃದ್ಧಿ ಯೋಜನಾ ನಕ್ಷೆ ಪಡೆದುಕೊಂಡು ಖಾತೆ ಮಾಡಿಕೊಡುವಂತೆ ಪಾಲಿಕೆಗೆ ಸಕಾಲದಡಿ 2018ರ ಡಿ.10ರಂದು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಿಲ್ಲದಿದ್ದರೂ ಕಂದಾಯ ಪರಿವೀಕ್ಷಿಕರು ಮೇಲಾಧಿಕಾರಿಗಳಿಗೆಖಾತಾ ಮಾಡುವುದಕ್ಕೆ ಶಿಪಾರಸು ಮಾಡಿದ್ದರು. 

ಇನ್ನು ಉಪ ಆಯುಕ್ತ ಮತ್ತು ವಲಯ ಜಂಟಿ ಆಯುಕ್ತರು ಸ್ಟೆರ್ಲಿಂಗ್ ಹರ್ಬನ್ ಇನ್ ಫ್ರಾಪ್ರಾಜೆಕ್ಟ್ಸ್ ಸಂಸ್ಥೆ ಅರ್ಜಿ ಸಲ್ಲಿಕೆ ಮಾಡಿದ ದಿನವೇ ಅಂದರೆ 2018ರ ಡಿ.10ರಂದು ಅನುಮೋದನೆ ನೀಡಲಾಗಿತ್ತು. ಜೊತೆಗೆ ಕೆಎಂಸಿ ಕಾಯ್ದೆ ಪ್ರಕಾರ ಹೊಸದಾಕಿ ಕಾತೆ ಮಾಡಿಕೊಡುವಾಗ ಪ್ರಸಕ್ತ ವರ್ಷ ಸೇರಿದಂತೆ ಹಿಂದಿನ ಆರು ವರ್ಷ ಒಟ್ಟು 7 ವರ್ಷದ ಆಸ್ತಿ ತೆರಿಗೆ ಪಡೆದು ಖಾತೆ ನೀಡಬೇಕು. ಆದರೆ, ಕಂದಾಯ ಅಧಿಕಾರಿಘಲು ಸ್ಟೆರ್ಲಿಂಗ್ ಹರ್ಬನ್ ಇನ್'ಫ್ರಾಪ್ರಾಜೆಕ್ಟ್ಸ್ ಸಂಸ್ಥೆಯಿಂದ ಕೇವಲ ಒಂದು ವರ್ಷದ ಆಸ್ತಿ ತೆರಿಗೆ ಪಡೆದು ಖಾತಾ ಮಾಡಿಕೊಟ್ಟಿದ್ದರು. ಈ ಕುರಿತು ಪಾಲಿಕೆಯ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ವರದಿ ನೀಡಿದ ಹಿನ್ನಲೆಯಲ್ಲಿ ಮೂವರು ಕಂದಾಯ ಅಧಿಕಾರಿಗಳು ಅಮಾನತು ಮಾಡಿ ಆಯುಕ್ತರು ಆದೇಶಿಸಿರುವುದರ ಜೊತೆಗೆ ಇಬ್ಬರು ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಾಸ್ ಕಳುಹಿಸುವುದಕ್ಕೆ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com