ಡಿವಿಎಸ್ ಭರವಸೆ: ಪ್ರಸನ್ನ ಉಪವಾಸ ಇಂದಿಗೆ ಮುಕ್ತಾಯ

ಪರಿಸರ ಸಂರಕ್ಷಣೆ, ಕಾರ್ಮಿಕ ಸ್ನೇಹಿ ನೀತಿ ಜಾರಿ, ಶೂನ್ಯ ತೆರಿಗೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು 6ನೇ ದಿನವಾದ ಶುಕ್ರವಾರ ಕೊನೆಗೊಳಿಸಲಿದ್ದಾರೆ. 

Published: 11th October 2019 07:53 AM  |   Last Updated: 11th October 2019 07:53 AM   |  A+A-


DVS

ಸದಾನಂದ ಗೌಡ

Posted By : Manjula VN
Source : The New Indian Express

ಬೆಂಗಳೂರು: ಪರಿಸರ ಸಂರಕ್ಷಣೆ, ಕಾರ್ಮಿಕ ಸ್ನೇಹಿ ನೀತಿ ಜಾರಿ, ಶೂನ್ಯ ತೆರಿಗೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು 6ನೇ ದಿನವಾದ ಶುಕ್ರವಾರ ಕೊನೆಗೊಳಿಸಲಿದ್ದಾರೆ. 

ಸತತ 5 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿರುವ ಪ್ರಸನ್ನ ಅವರನ್ನು ಗುರುವಾರ ಸಂಜೆ ಭೇಟಿ ಮಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಸತ್ಯಾಗ್ರಹದ ಕಾರಣವಾದ ವಿಚಾರದ ಬಗ್ಗೆ ಕೇಂದ್ರ ಸರ್ಕಾರದೊಂದಿದೆ ಚರ್ಚಿಸುವ ವೇದಿಕೆಯನ್ನು 1 ತಿಂಗಳೊಳಗೆ ಸಿದ್ದಪಡಿಸುವ ಭರವಸೆ ನೀಡಿದರು. ಈ ವೇಳೆ ಉಪವಾಸ ಕೊನೆಗೊಳಿಸುವಂತೆ ಮನವಿ ಮಾಡಿಕೊಂಡರು. 

ಇದಕ್ಕೆ ಪ್ರಸನ್ನ ಅವರು, ನಮಗೆ ಕೇಂದ್ರದೊಂದಿಗೆ ಚರ್ಚೆಗೆ ವೇದಿಕೆ ಸಿದ್ಧಮಾಡಿಕೊಟ್ಟರೆ ಸಾಕು. ಆದರೆ, ಈ ಕೂಡಲೇ ಉಪವಾಸ ಕೈಬಿಡಲು ಸಾಧ್ಯವಿಲ್ಲ. ಶುಕ್ರವಾರ ಸಂಜೆ 5 ಗಂಟೆಗೆ ಜಯಪ್ರಕಾಶ ನಾರಾಯಣ ಜನ್ಮದಿನಗ ಅಂಗವಾಗಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಅದರಲ್ಲಿ ಎಲ್ಲರ ಜೊತೆ ಚರ್ಚೆ ಮಾಡಿ ಉಪವಾಸ ಕೈಬಿಡುವುದಾಗಿ ಘೋಷಣೆ ಮಾಡಿದರು. 

ಈ ನಡುವೆ 5 ದಿನಗಳಿಂದ ಸತ್ಯಾಗ್ರಹ ಕೈಗೊಂಡಿರುವ ಪ್ರಸನ್ನ ಅವರ ಆರೋಗ್ಯದ ಮೇಲೆ ಉಪವಾಸದ ಪರಿಣಾಮ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಅನ್ನ-ಆಹಾರ ತ್ಯಜಿಸಿರುವುದರಿಂದ ದೇಹ ನಿಶಕ್ತಿಗೊಂಡಿದೆ. ಉಪವಾಸ ಸತ್ಯಾಗ್ರಹ ಹಿನ್ನಲೆಯಲ್ಲಿ ರಾಜಕಾರಣಿಗಳು, ರಂಗಕರ್ಣಿಗಳು, ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಗುರುವಾರವೂ ಪ್ರಸನ್ನ ಅವರನ್ನು ಭೇಟಿಯಾಗಿ ಕೆಲ ಕಾಲ ಚರ್ಚಿಸಿದರು. ಅದರಂತೆ ಬೆಳಿಗ್ಗೆ ಉಪ ಮುಖ್ಯಮಂತ್ರಿ ಸಿ.ಅಶ್ವತ್ಥ ನಾರಾಯಣ ಅವರು ಉಪವಾಸ ಸ್ಥಳಕ್ಕೆ ಭೇಟಿ ನೀಡಿ ಪ್ರಸನ್ನ ಅವರ ಆರೋಗ್ಯ ವಿಚಾರಿಸಿ, ಬೇಡಿಕೆಗಳ ಬಗ್ಗೆ ತಿಳಿದುಕೊಂಡರು. ನಂತರ ಉಪವಾಸ ಕೈ ಬಿಡುವಂತೆ ಪ್ರಸನ್ನ ಅವರಿಗೆ ಮನವಿ ಮಾಡಿದರು. 

ತಮ್ಮ ಆಗ್ರಹಗಳನ್ನು ಮುಂದಿಡಲು ವೇದಿಕೆ ಬೇಕೆಂದು ಕೇಳಿದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೇನೆ. ಇನ್ನೊಂದು ತಿಂಗಳಲ್ಲಿ ಸಭೆ ನಡೆಯಲಿದೆ. ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದೇನೆ. ಶುಕ್ರವಾರ ಉಪವಾಸ ಕೈಬಿಡುವುದಾಗಿ ತಿಳಿಸಿದ್ದಾರೆಂದು ಸದಾನಂದ ಗೌಡ ಅವರು ಹೇಳಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp