ಹಾಸನ: ನದಿಯಲ್ಲಿ ಈಜಲು ಹೋದ 3 ಯುವಕರು ನೀರುಪಾಲು, ಇಬ್ಬರ ಮೃತದೇಹ ಪತ್ತೆ

ಮಂಗಳವಾರ ಯಗಚಿ ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಪತ್ತೆಯಾಗಿದೆ. ಎನ್‌ಡಿಆರ್‌ಎಫ್ ತುರ್ತು ನಿಗಾ ಘಟಕದ ಸಹಕಾರದಿಂದ  ಆಲೂರು ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಮಂಗಳವಾರ ಯಗಚಿ ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಪತ್ತೆಯಾಗಿದೆ. ಎನ್‌ಡಿಆರ್‌ಎಫ್ ತುರ್ತು ನಿಗಾ ಘಟಕದ ಸಹಕಾರದಿಂದ  ಆಲೂರು ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.

ಈಜುಗಾರರು ಹುನಸುವಳ್ಳಿಯ ರತನ್ ಮತ್ತು ಭೀಮರಾಜ್ ಎನ್ನುವವರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.ಇನ್ನೋರ್ವ ಯುವಕ ಮನುವಿನ ಪತ್ತೆಗೆ ಶೋಧ ಮುಂದುವರಿದಿದೆ.

ಸ್ಥಳೀಯ ಈಜುಗಾರರ 20 ಗಂಟೆಗಳ ನಿರಂತರ ಪ್ರಯತ್ನ ವಿಫಲವಾದ ಹಿನ್ನೆಲೆ ಪೋಲೀಸರು ಎನ್‌ಡಿಆರ್‌ಎಫ್ ತಂಡವನ್ನು ಕರೆಸಿದ್ದರು. ಇದೀಗ ಯುವಕರು ನೀರಿಗಿಳಿದಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ರತನ್ ದೇಹ ಪತ್ತೆಯಾಗಿದ್ದರೆ ದ ಐದು ಕಿ.ಮೀ ದೂರದಲ್ಲಿ ಭೀಮರಾಜ್ ಮೃತದೇಹ ದೊರಕಿದೆ.

ರತನ್, ಭೀಮರಾಜ್, ಮನು, ಸಂಜಯ್ ಮತ್ತು ಧನು- ಐದು ಮಂದಿ ಮಂಗಳವಾ ಯಗಚಿ ನದಿಗೆ ಈಜಲು ತೆರಳಿದ್ದರು.ಈ ವೇಳೆ ಮೂವರು ನೀರಲ್ಲಿ ಕೊಚ್ಚಿ ಹೋದರೆ ಅದೃಷ್ಟವಶಾತ್, ಸಂಜಯ್ ಮತ್ತು ಧನು ದಡ ಸೇರುವಲ್ಲಿ ಸಫಲವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com