ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಅಕ್ರಮ: ಪ್ರಕರಣ ಸಿಬಿಐ ವಶಕ್ಕೆ ನೀಡಲು ಐಟಿ ಚಿಂತನೆ

ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಮೂರು ಕಾಲೇಜುಗಳಿಂದ ಅಕ್ರಮ ನಡೆದಿದ್ದು, ಪ್ರಕರಣವನ್ನು ಸಿಬಿಐ ವಶಕ್ಕೆ ನೀಡಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಅಕ್ರಮ: ಪ್ರಕಣರ ಸಿಬಿಐ ವಶಕ್ಕೆ ನೀಡಲು ಐಟಿ ಚಿಂತನೆ
ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಅಕ್ರಮ: ಪ್ರಕಣರ ಸಿಬಿಐ ವಶಕ್ಕೆ ನೀಡಲು ಐಟಿ ಚಿಂತನೆ

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಮೂರು ಕಾಲೇಜುಗಳಿಂದ ಅಕ್ರಮ ನಡೆದಿದ್ದು, ಪ್ರಕರಣವನ್ನು ಸಿಬಿಐ ವಶಕ್ಕೆ ನೀಡಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ವೈದ್ಯಕೀಯ ಸೀಟು ಹಂಚಿಕೆಯಲ್ಲಿ ರೂ.100 ಕೋಟಿ ಅಕ್ರಮ ನಡೆದಿರುವುದು ಕಂಡು ಬಂದಿದ್ದು, ಈ ಮೂರು ಕಾಲೇಜುಗಳಲ್ಲಿ ಎರಡು ಕಾಲೇಜುಗಳು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದುಬಂದಿದೆ. 

ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಪರಮೇಶ್ವರ್ ವಿರುದ್ಧ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಹವಾಲಾ ಮೂಲಕ ಹಣ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆಯನ್ನು ತೀವ್ವರಗೊಳಿಸಿದ್ದು, ಹವಾಲಾ ಹಗರಣ ದಾಖಲಾದರೆ, ಪರಮೇಶ್ವರ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. 

ನಿನ್ನೆಯಷ್ಟೇ ಐಟಿ ಇಲಾಖೆ ಮಾಧ್ಯಮ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಪ್ರಕಟಣೆಯಲ್ಲಿ ಹವಾಲಾ ಮೂಲಕ ಹಣ ವರ್ಗಾವಣೆ ಮಾಡಿರುವ ಬಗ್ಗೆ ಉಲ್ಲೇಖಿಸಿದೆ. ಅಲ್ಲದೆ, ತನಿಖೆ ವೇಳೆ ರೂ.4.42 ಕೋಟಿ ಅಘೋಷಿತ ನಗದು ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ರೂ.89 ಲಕ್ಷ ಪ್ರಮುಖ ಟ್ರಸ್ಟಿಗೆ ಸೇರಿದೆ. ಅಘೋಷಿತ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಸೀಟ್ ಬ್ಲಾಕ್ ಮೂಲಕ ಅಕ್ರಮ ಹಣ ಸಂಪಾದನೆ ಮಾಡಿರುವುದು ಕಂಡು ಬಂದಿದ್ದು, ಪ್ರತಿ ಸೀಟ್'ಗೆ ರೂ.50 ಲಕ್ಷದಿಂದ 65 ಲಕ್ಷ ಪಡೆದುಕೊಳ್ಳಲಾಗಿದೆ. 

184 ಸೀಟ್ ಗಳಿಂದ ಒಟ್ಟು ರೂ.100 ಕೋಟಿ ಗಳಿಗೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಅಲ್ಲದೆ, ಈವರೆಗೆ ರೂ.8.82 ಕೋಟಿ ಅಘೋಷಿತ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ. 

ಪರಮೇಶ್ವರ್ ಅವರ ಒಡೆತನದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಶಿಕ್ಷಣ ಸಂಸ್ಥೆ ಸೇರಿದಂತೆ ಅವರಿಗೆ ಸೇರಿದ ಸ್ಥಳಗಳ ಮೇಲೆ ಐಟಿ ಅಧಿಕಾರಿಗಳ ತಂಡವು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆಯನ್ನು ಮುಂದುವರೆಸಿದೆ. ದಲ್ಲಾಳಿ ಮೂಲಕ ವೈದ್ಯಕೀಯ ಸೀಟ್ ಬ್ಲಾಕ್ ಮಾಡಿಸಿಕೊಂಡು ಅವರಿಗೆ ಲಕ್ಷಾಂತರ ಹಣ ನೀಡಲಾಗಿದೆ. ಸೀಟ್ ಗಳನ್ನು ಮಾರಾಟ ಕೂಡ ಮಾಡಲಾಗಿದೆ. ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿ ಸೀಟ್ ಗಳ ಬ್ಲಾಕ್ ಮಾಡಿರುವ ಬಗ್ಗೆ ದಲ್ಲಾಳಿಯೊಂದಿಗೆ ನಡೆದ ಮಾತುಕತೆಯ ಮಾಹಿತಿಯೂ ಸಹ ಲಭ್ಯವಾಗಿದೆ. ಟ್ರಸ್ಟಿಗಳ ಅನುಕೂಲಕ್ಕೆ ತಕ್ಕಂತೆ ಹಣ ಬಳಕೆ ಮಾಡಿರುವುದು ವಿಚಾರಣೆ ತಿಳಿದುಬಂದಿದೆ. 

ವಿಚಾರಣೆ ವೇಳೆ ಮಧ್ಯವರ್ತಿಗಳ ಬಳಕೆಯೂ ಸೇರಿತಂತೆ ಿತರೆ ದಾಖಲೆಗಳು ಮತ್ತು ಮಾಹಿತಿಗಳು ಲಭ್ಯವಾಗಿವೆ. ಇವುಗಳ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಹವಾಲಾ ಮೂಲಕ ಹಣ ಸಾಗಾಣೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಲಾಗುವುದು. ಮಧ್ಯವರ್ತಿಗಳು ಮತ್ತು ಆಡಳಿತ ಮಂಡಳಿಯು ನಡೆಸಿರುವ ಸಂಭಾಷಣೆಯಲ್ಲಿ ಸೀಟ್ ಬ್ಲಾಕ್'ಗೆ ಬಳಸಿಕೊಳ್ಳುವ ವಿದ್ಯಾರ್ಥಿಗಳ ಹೆಸರು ಸಹ ಪ್ರಸ್ತಾಪವಾಗಿದೆ. ಈ ಬಗ್ಗೆ ಇಲಾಖೆಗೆ ದಾಖಲೆಗಳು ಲಭ್ಯವಾಗಿವೆ. ಯಾವುದೇ ದಾಖಲೆ ಇಲ್ಲದೆ ಹಣ ವರ್ಗಾವಣೆಯಾಗಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com