ಕದ್ರಿ ಗೋಪಾಲನಾಥ್ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಯ್ತು ಕಟೀಲ್ ಫೇಸ್ ಬುಕ್ ಪೋಸ್ಟ್

ನಿನ್ನೆ ನಿಧನರಾದ್ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಅವರ ಅಂತಿಮ ದರ್ಶನ ಪಡೆದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೋಪಾಲನಾಥ್ ಅವರ ಕುಟುಂಬಸ್ಥರಲ್ಲಿ ಅಸಮಾಧಾನ ಮೂಡಿಸಿದೆ.

Published: 12th October 2019 08:54 AM  |   Last Updated: 12th October 2019 06:15 PM   |  A+A-


Kateel’s Facebook post upsets Kadri Gopalnath's family

ಕದ್ರಿ ಗೋಪಾಲನಾಥ್ ದರ್ಶನ ಪಡೆದ ಕಟೀಲ್

Posted By : Shilpa D
Source : The New Indian Express

ಮಂಗಳೂರು: ನಿನ್ನೆ ನಿಧನರಾದ್ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಅವರ ಅಂತಿಮ ದರ್ಶನ ಪಡೆದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್  ಕಟೀಲ್ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೋಪಾಲನಾಥ್ ಅವರ ಕುಟುಂಬಸ್ಥರಲ್ಲಿ ಅಸಮಾಧಾನ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ಖಾಸಗಿ ಆಸ್ಪತ್ರೆಗೆ ತೆರಳಿ  ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದರು ಇದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. 

ಗೋಪಾಲನಾಥ್ ಅವರ ಮೃತ ದೇಹವನ್ನು ಕೋಲ್ಡ್ ಸ್ಟೋರೇಜ್ ನಲ್ಲಿಡಲಾಗಿತ್ತು, ಈ ವೇಳೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್, ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದ ಜನಪ್ರಿಯ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅವಶೇಷಗಳಿಗೆ ನಾನು ಗೌರವ ಸಲ್ಲಿಸಿದೆ ಎಂದು ಬರೆದುಕೊಂಡಿದ್ದರು. 

ನಾವು ಶವವನ್ನು ಸೋಮವಾರ ಸಾರ್ವಜನಿಕರಿಗೆ ಇಡುವ ಸಲುವಾಗಿ ಶೈತ್ಯಾಗಾರದಲ್ಲಿಟ್ಟಿದ್ದೆವು, ಆದರೆ ಆತುರವಾಗಿ ಪೋಸ್ಟ್ ಹಾಕಿರುವ ನಳಿನ್ ಕುಮಾರ್ ನಾನು ಮೃತರ ದೇಹದ ಅವಶೇಷಗಳಿಗೆ ನಾನು ಅಂತಿಮ ನಮನ ಸಲ್ಲಿಸಿದ್ದೇನೆ ಎಂದು ಹಾಕಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದು ಗೋಪಾಲನಾಥ್ ಕುಟುಂಬಸ್ಥರುಪ ಬೇಸರ ವ್ಯಕ್ತಪಡಿಸಿದ್ದಾರೆ. 
 

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp