ಆರ್. ಅಶೋಕ್
ಆರ್. ಅಶೋಕ್

ನೆರೆ ಸಂತ್ರಸ್ತರಿಗೆ ಮಾದರಿ ಪರಿಹಾರ ಪ್ಯಾಕೇಜ್ ನೀಡಲಾಗಿದೆ- ಆರ್. ಅಶೋಕ್ 

ಪ್ರವಾಹ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದ್ದು,ಇಡೀ ದೇಶಕ್ಕೆ ಮಾದರಿಯಾಗುವಂತಹ ಪರಿಹಾರ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಬೆಂಗಳೂರು: ಪ್ರವಾಹ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದ್ದು,ಇಡೀ ದೇಶಕ್ಕೆ ಮಾದರಿಯಾಗುವಂತಹ ಪರಿಹಾರ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ನೆರೆ ಚರ್ಚೆಗೆ ಉತ್ತರ ನೀಡಿದ ಅವರು, 22 ಜಿಲ್ಲಾಧಿಕಾರಿಗಳ ಖಾತೆಯಲ್ಲಿ ನೆರೆ ಪರಿಹಾರ ಕಾರ್ಯಕ್ಕಾಗಿ ಒಂದು ಸಾವಿರದ 41 ಕೋಟಿ ರೂಪಾಯಿ ಹಣ ಇದೆ, ತೀವ್ರ ಸಂಕಷ್ಟಕ್ಕೆ ಒಳಗಾದ ಬೆಳಗಾವಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 505 ಕೋಟಿ ರೂಪಾಯಿ ಇದೆ ಎಂದು ಅವರು ಹೇಳಿದರು.

ಖುದ್ದಾಗಿ ನೆರೆ ಸ್ಥಳಕ್ಕೆ ಭೇಟಿ  ನೀಡಿ ಸಂತ್ರಸ್ತರ ದುಃಖ ದುಮ್ಮಾನಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ   ಚರ್ಚಿಸಿ   ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಒಟ್ಟು ಕೃಷಿ ಭೂಮಿ 754191 ಹೆಕ್ಟೇರ್   ಬೆಳೆ  ನಾಶವಾಗಿದೆ.ಅಲ್ಲದೆ, 16425 ಹೆಕ್ಟೇರ್ ಕಾಫಿ  ಬೆಳೆ ನಷ್ಟವಾಗಿದೆ.   ಅದೇ ರೀತಿ 3400 ಜಾನುವಾರುಗಳ ಜೀವ ಹಾನಿಯಾಗಿದೆ. ನೀರು ನುಗ್ಗಿದ ಮನೆ, ಭಾಗಶಃ ಹಾನಿಯಾಗೆಗಿರುವ ಮನೆ ಸೇರಿ ಒಟ್ಟು 247625  ಮನೆಗಳು ಹಾಳಾಗಿವೆ ಎಂದರು. 

Related Stories

No stories found.

Advertisement

X
Kannada Prabha
www.kannadaprabha.com