ವೈದ್ಯಕೀಯ ಸೀಟಿನಲ್ಲಿ ಅಕ್ರಮ ನಡೆದಿದೆ ಎಂದು ಸತ್ಯ ಒಪ್ಪಿಕೊಂಡಿದ್ದ ಪರಮೇಶ್ವರ ಅಣ್ಣನ ಪುತ್ರ: ಐಟಿ ಮಾಹಿತಿ

ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಎರಡು ಕಾಲೇಜುಗಳ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಅಣ್ಣನ ಪುತ್ರನೇ ಒಪ್ಪಿಕೊಂಡಿದ್ದಾನೆಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 
ಪರಮೇಶ್ವರ್
ಪರಮೇಶ್ವರ್

ಬೆಂಗಳೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಎರಡು ಕಾಲೇಜುಗಳ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಅಣ್ಣನ ಪುತ್ರನೇ ಒಪ್ಪಿಕೊಂಡಿದ್ದಾನೆಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಪರಮೇಶ್ವರ್ ಅವರು ನಡೆಸುತ್ತಿರುವ ಶ್ರೀ ಸಿದ್ಱಾರ್ಥ ವೈದ್ಯಕೀಯ ಕಾಲೇಜು ಹಾಗೂ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಜ್ ಸೆಂಟರ್'ನಲ್ಲಿ ಅಣ್ಣನ ಪುತ್ರ ಕೂಡ ಟ್ರಸ್ಟಿಯಾಗಿದ್ದು, ವಿಚಾರಣೆ ವೇಳೆ ಅಕ್ರಮ ನಡೆದಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆಂದು ಐಟಿ ಉನ್ನತ ಮೂಲಗಳು ಮಾಹಿತಿ ಬಹಿರಂಗಪಡಿಸಿದೆ. 

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 132 ಅಡಿಯಲ್ಲಿ ಪರಮೇಶ್ವರ್ ಅವರ ಸಂಬಂಧಿಕನ ಹೇಳಿಕೆಯನ್ನು ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಹೇಳಿಕೆಯಲ್ಲಿ ಎರಡು ಕಾಲೇಜುಗಳ ಸರ್ಕಾರಿ ಸೀಟುಗಳನ್ನು ಬ್ಲಾಕ್ ಮಾಡಿದ್ದು, ಹಾಗೂ ಅವುಗಳನ್ನು ಲಕ್ಷಾಂತರ ರುಪಾಯಿ ಹಣಕ್ಕೆ ಮಾರಾಟ ಮಾಡಿದ್ದು ಸತ್ಯ ಎಂದು ಹೇಳಿಕೊಂಡಿರುವುದು ತಿಳಿದುಬಂದಿದೆ. 

ಎರಡು ಕಾಲೇಜುಗಳ ಹಾಸ್ಟೆಲ್ ನಲ್ಲಿದ್ದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳು, ಸಾಕ್ಷ್ಯಗಳು ದೊರಕಿವೆ ಎಂದು ಹೇಳಲಾಗುತ್ತಿದೆ. 

ವೈದ್ಯಕೀಯ ಕೌನ್ಸಿಲಿಂಗ್ ಸಮಿತಿಯಿಂದ ನೇಮಕಗೊಂಡಿದ್ದ ಸೀಟುಗಳನ್ನೇ ಮಾರಾಟ ಮಾಡಿದ್ದು, ಸೀಟು ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ. ಕಮಿಷನ್ ಏಜೆಂಟ್ ಗಳು, ಹವಾಲಾ ಆಪರೇಟರ್ ಗಳು ದೇಶದಾದ್ಯಂತ ಇರುವ ನೆಟ್ ವರ್ಕ್'ಗಳ ಮೂಲಕ ಈ ದಂಧೆಯನ್ನು ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಹಲವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಕೆಲ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೋಲಾರದಲ್ಲಿರುವ ಶ್ರೀ ದೇವರಾಜು ಅರಸು ಶಿಕ್ಷಣ ಸಂಸ್ಥೆ ಮೇಲೂ ದಾಳಿ ನಡೆಸಿರುವ ಐಟಿ ಅಧಿಕಾರಿಗಳು 29 ಸರ್ಕಾರಿ ಸೀಟುಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com