ಶಿವಮೊಗ್ಗ: ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ 2 ತಿಂಗಳ ನಂತರ ಪತ್ತೆ

ಕುಮದ್ವತಿ ನದಿ ಪ್ರವಾಹದಲ್ಲಿ‌ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವನ ಶವ ಬರೋಬ್ಬರಿ ಎರಡು ತಿಂಗಳ ನಂತರ ನದಿಪಾತ್ರದಲ್ಲಿ ಪತ್ತೆಯಾಗಿದೆ.
 

Published: 14th October 2019 04:52 PM  |   Last Updated: 14th October 2019 05:00 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಶಿವಮೊಗ್ಗ: ಕುಮದ್ವತಿ ನದಿ ಪ್ರವಾಹದಲ್ಲಿ‌ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವನ ಶವ ಬರೋಬ್ಬರಿ ಎರಡು ತಿಂಗಳ ನಂತರ ನದಿಪಾತ್ರದಲ್ಲಿ ಪತ್ತೆಯಾಗಿದೆ.

ಕುಂಸಿಯ ಅಮರನಾಥ್ ಅವರ ಮೃತ ದೇಹ ಕೊಳೆತ‌ ಸ್ಥಿತಿಯಲ್ಲಿ ಚೊರಡಿ ಸಮೀಪದ ದೊಡ್ಡಿಮಟ್ಟಿ ಬಳಿ ಕುಮದ್ವತಿ ನದಿ ತೀರದಲ್ಲಿ ದೊರೆತಿದೆ.

ಆಗಸ್ಟ್ ತಿಂಗಳಲ್ಲಿ ಚೊರಡಿ ಕುಮದ್ವತಿ‌ ನದಿ ಸೇತುವೆ ಮೇಲೆ ನಿಂತು‌ ನದಿಯನ್ನು ನೋಡುತ್ತಿದ್ದಾಗ ಬೋಲೇರೋ ಡಿಕ್ಕಿ ಹೊಡೆದು ಮೂವರು ನದಿಗೆ ಬಿದ್ದು ಮೃತಪಟ್ಟಿದ್ದರು. ಮರುದಿನವೇ ರಾಮಪ್ಪ ಎಂಬುವರ ಶವಪತ್ತೆಯಾಗಿತ್ತು. ಆದರೆ, ಹರೀಶ್ ಹಾಗೂ ಅಮರನಾಥ್ ಎಂಬುವವರ ಶವಕ್ಕಾಗಿ‌ ರಕ್ಷಣಾ ಸಿಬ್ಬಂದಿ ಸತತ ಹದಿನೈದು ದಿನಗಳ ಕಾರ್ಯಾಚರಣೆ‌ ನಡೆಸಿದರೂ ಅವರಿಬ್ಬರ ಶವ ಪತ್ತೆಯಾಗಿರಲಿಲ್ಲ. ಹೀಗಾಗಿ ಅಸಮಾಧಾನಗೊಂಡ ಎನ್ ಡಿಆರ್ ಎಫ್ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp