ಮೈಸೂರು-ಬೆಂಗಳೂರು ಮಧ್ಯೆ ಮಹಿಳೆಯರಿಗೆ ವಿಶೇಷ ರೈಲು ನೀಡಿ: ಸಂಸದೆ ಸುಮಲತಾ ಮನವಿ 

ಪ್ರತಿನಿತ್ಯ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗಲು ಮಹಿಳೆಯರಿಗೆ ವಿಶೇಷ ರೈಲನ್ನು ಬೆಂಗಳೂರಿನಿಂದ ಮೈಸೂರಿಗೆ ಪ್ರಾರಂಭಿಸುವಂತೆ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯೆ ಸುಮಲತಾ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮಂಡ್ಯ ಸಂಸದೆ ಸುಮಲತಾ
ಮಂಡ್ಯ ಸಂಸದೆ ಸುಮಲತಾ

ಮಂಡ್ಯ: ಪ್ರತಿನಿತ್ಯ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗಲು ಮಹಿಳೆಯರಿಗೆ ವಿಶೇಷ ರೈಲನ್ನು ಬೆಂಗಳೂರು-ಮೈಸೂರು ಮಧ್ಯೆ ಪ್ರಾರಂಭಿಸುವಂತೆ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯೆ ಸುಮಲತಾ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ರಾಜ್ಯದ ಸಂಸದರು ಮತ್ತು ಉನ್ನತ ಮಟ್ಟದ ರೈಲ್ವೆ ಅಧಿಕಾರಿಗಳ ಮಧ್ಯೆ ನಿನ್ನೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸುಮಲತಾ, ಮೈಸೂರು-ಬೆಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 4 ಸಾವಿರದಿಂದ 5 ಸಾವಿರದವರೆಗೆ ಮಹಿಳೆಯರು ಉದ್ಯೋಗಕ್ಕೆ ಓಡಾಡುತ್ತಿರುತ್ತಾರೆ. ಜನದಟ್ಟಣೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷ ರೈಲು ಬಿಡುಗಡೆ ಮಾಡಿದರೆ ಅವರಿಗೆ ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ನಾನು ಚುನಾವಣಾ ಪ್ರಚಾರ ನಡೆಸುವ ವೇಳೆ ಮಂಡ್ಯ ಜಿಲ್ಲೆಯ ಮಹಿಳೆಯರು ಈ ಬೇಡಿಕೆಯನ್ನು ನನ್ನ ಮುಂದಿಟ್ಟಿದ್ದರು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಸಹ ಪತ್ರ ಬರೆದಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com