ಎಸಿಬಿ ದಾಳಿ: ಕೆಐಎಡಿಬಿ ಹಿರಿಯ ಸಹಾಯಕ ಸೇರಿ 7 ಮಂದಿ ಸೆರೆ

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹಿರಿಯ ಸಹಾಯಕ ಸೇರಿ ಮಧ್ಯವರ್ತಿಗಳನ್ನು ಒಳಗೊಂಡಂತೆ 7 ಜನರನ್ನು ಬಂಧಿಸಿದೆ ಮತ್ತು ದಾಳಿಯಲ್ಲಿ ವಿವಿಧ ಬ್ಯಾಂಕುಗಳ 12,90,620 ನಗದು, 13 ಖಾಲಿ ಚೆಕ್‌ಗಳನ್ನು ವಶಪಡಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹಿರಿಯ ಸಹಾಯಕ ಸೇರಿ ಮಧ್ಯವರ್ತಿಗಳನ್ನು ಒಳಗೊಂಡಂತೆ 7 ಜನರನ್ನು ಬಂಧಿಸಿದೆ ಮತ್ತು ದಾಳಿಯಲ್ಲಿ ವಿವಿಧ ಬ್ಯಾಂಕುಗಳ 12,90,620 ನಗದು, 13 ಖಾಲಿ ಚೆಕ್‌ಗಳನ್ನು ವಶಪಡಿಸಿಕೊಂಡಿದೆ.

ಕೈಗಾರಿಕಾ ಅಭಿವೃದ್ಧಿ ಉದ್ದೇಶಕ್ಕಾಗಿ ಕೆಐಎಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ರೈತರಿಂದ ಮಧ್ಯವರ್ತಿಗಳು ಖಾಲಿ ಚೆಕ್ ಸಂಗ್ರಹಿಸುತ್ತಿದ್ದರು. ಭೂಮಿ ಕಳೆದುಕೊಂಡಿದ್ದಕ್ಕೆ ಸರ್ಕಾರ ನೀಡುವ ಪರಿಹಾರದ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮಾ ಆದಾಗ ಅದರಿಂದ ಶೇಕಡಾ 10ರಷ್ಟು ಕಮಿಷನ್ ಪಡೆಯಲು ಈ ರೀತಿ ಚೆಕ್ ಪಡೆಯಲಾಗಿತ್ತು ಎಂದು ಎಸಿಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೈಗಾರಿಕಾ ಅಭಿವೃದ್ಧಿ ಉದ್ದೇಶಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ 800 ಎಕರೆ ಭೂಮಿಗೆ ಪರಿಹಾರ ಪಾವತಿಸಲು ಕರ್ನಾಟಕ ಸರ್ಕಾರ ಇತ್ತೀಚೆಗೆ 50 ಕೋಟಿ ರೂ.ಬಿಡುಗಡೆ ಮಾಡಿತ್ತು. ಇದರ ಸುಳಿವು ಅರಿತ ಮಧ್ಯವರ್ತಿಗಳು ಈ ಸಂಚು ರೂಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com