ವೇತನ ಪರಿಷ್ಕರಣೆ ವಿವಾದ: ಎಚ್ಎಎಲ್ ನೌಕರರಿಂದ ಮುಷ್ಕರ ಮುಂದುವರಿಕೆ ಬೆದರಿಕೆ

ವೇತನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ನೌಕರರ ಒಕ್ಕೂಟ ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿರಿಸಿದೆ.
ಎಚ್ಎಎಲ್ ನೌಕರರ ಮುಷ್ಕರ
ಎಚ್ಎಎಲ್ ನೌಕರರ ಮುಷ್ಕರ

ಬೆಂಗಳೂರು: ವೇತನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ನೌಕರರ ಒಕ್ಕೂಟ ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿರಿಸಿದೆ.

ಸಂಸ್ಥೆ ನೌಕರರಿಗೆ ಸೂಕ್ತವಾಗಿ ವೇತನ ಪರಿಷ್ಕರಣೆ ಮಾಡಿದೆ ಎಂಬ ವಾದವನ್ನು ಅಲ್ಲಗೆಳೆದಿರುವ ಎಎಚ್ಎಲ್ ನೌಕರರ ಒಕ್ಕೂಟದ ಕಾರ್ಯದರ್ಶಿ ಸೂರ್ಯನಾರಾಯಣ ಚಂದ್ರಶೇಖರ್, ಕಂಪನಿಯ ಕಚ್ಚಾ ವಸ್ತುವನ್ನು ಉತ್ಪಾದನೆಯನ್ನಾಗಿ ಪರಿವರ್ತಿಸುವ ಎಲ್ಲಾ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆಡಳಿತ ಮಂಡಳಿ ಬಿಂಬಿಸುತ್ತಿರುವಂತೆ ಶೇ. 51ರಷ್ಟು ನೌಕರರು ಕೆಲಸದಲ್ಲಿ ತೊಡಗಿಲ್ಲ. ಸದ್ಯ ಅಲ್ಲಿ ಗುತ್ತಿಗೆ ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವರು ಕೂಡ ನಿರ್ವಹಣಾ ವಿಭಾಗದಲ್ಲಿದ್ದಾರೆ ಅಷ್ಟೇ ಎಂದಿದ್ದಾರೆ.

ನೌಕರರ ಒಕ್ಕೂಟ ಇತರ ಡಿಪಿಎಸ್ ಯು ಗಳ ಮಾದರಿಯಲ್ಲಿ ವೇತನ ಪರಿಷ್ಕರಣೆಗೊಳಿಸುವಂತೆ ಬೇಡಿಕೆ ಇಟ್ಟಿವೆ. ಇವುಗಳು 2007-11 ಹಾಗೂ 2012-16ರ ಐದು ವರ್ಷಗಳ ಅವಧಿಯ ವೇತನದ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದವು. ನೌಕರರ ಮೂಲ ವೇತನದ ಜೊತೆಗೆ, ನೀಡಲಾಗುತ್ತಿದ್ದ ಪ್ರತ್ಯೇಕ ಭತ್ಯೆಗಳನ್ನು ವೇತನದೊಂದಿಗೆ ವಿಲೀನಗೊಳಿಸಲು ಸಂಸ್ಥೆ ನಿರ್ಧರಿಸಿವೆ.ಇದರಿಂದ ತಮಗೆ ಲಾಭಕ್ಕಿಂತ ಹೆಚ್ಚು ನಷ್ಟವಾಗುತ್ತದೆ. ಸಂಸ್ಥೆಯ ಅಧಿಕಾರಿಗಳ ಸಮಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡುವಂತೆ ಕೋರುತ್ತಿದ್ದೇವೆಯೇ ಹೊರತು ಮೂಲ ಆದಾಯವನ್ನೇ ಅವರ ಸಮಕ್ಕೆ ಹೆಚ್ಚಿಸಿ ಎಂದು ಕೇಳುತ್ತಿಲ್ಲ ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಸೇನಾ ಮುಖ್ಯಸ್ಥರ ಬೇಡಿಕೆ
ಏತನ್ಮಧ್ಯೆ ಅತ್ತ ಎಚ್ ಎಎಲ್ ಸಿಬ್ಬಂದಿಗಳ ನೌಕರರ ಮುಷ್ಕರ ಮುಂದುವರೆದಿರುವಂತೆ ಅತ್ತ ದೆಹಲಿಯ ಡಿಆರ್ ಡಿಒ ಭವನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಸ್ವದೇಶಿ ತಂತ್ರಜ್ಞಾನದ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ನಿನ್ನೆ ನಡೆದ ಡಿಆರ್ ಡಿಒ ನಿರ್ದೇಶಕರ 41ನೇ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಯುದ್ಧಗಳನ್ನು ಎದುರಿಸಲು ಮತ್ತು ಗೆಲ್ಲಲು ಭಾರತವು ಸ್ವದೇಶಿ ಶಸ್ತ್ರಾಸ್ತ್ರಗಳನ್ನೇ ಬಳಸಲಿದೆ.

ನಮಗೆ ಆ ಸಾಮರ್ಥ್ಯ ಈಗ ಸಿದ್ಧಿಸಿದೆ. ಶಸ್ತ್ರಾಸ್ತ್ರಗಳು ಮತ್ತು ಇತರೆ ಯುದ್ಧ ಪರಿಕರಗಳನ್ನು ಅಭಿವೃದ್ಧಿಪಡಿಸುವಾಗ ಭವಿಷ್ಯದಲ್ಲಿ ಎದುರಿಸಬೇಕಾದ ಯುದ್ಧಗಳನ್ನು ಗಮನದಲ್ಲಿಟ್ಟುಕೊಂಡು ಡಿಆರ್‌ಡಿಒ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಮೂಲಕವೇ ಭಾರತ ಯುದ್ಧಗಳನ್ನು ಎದುರಿಸಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com