ಸಂಚಾರ ದಟ್ಟಣೆ ತಪ್ಪಿಸಲು ಟಿನ್ ಫ್ಯಾಕ್ಟರಿ-ಸಿಲ್ಕ್ ಬೋರ್ಡ್ ನಡುವೆ ಪ್ರತ್ಯೇಕ ಬಸ್ ಪಥ: ಅ.20 ಕ್ಕೆ ಚಾಲನೆ! 

ಸಂಚಾರ ದಟ್ಟಣೆ ತಪ್ಪಿಸಲು ನಗರದ 12 ಪ್ರಮುಖ ರಸ್ತೆಗಳಲ್ಲಿ ಬಸ್ ಪಥವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅ.20 ರಂದು ಟಿನ್ ಫ್ಯಾಕ್ಟರಿ- ಸಿಲ್ಕ್ ಬೋರ್ಡ್ ನಡುವೆ ಪ್ರತ್ಯೇಕ ಬಸ್ ಪಥಕ್ಕೆ ಚಾಲನೆ ಸಿಗಲಿದೆ. 

Published: 16th October 2019 02:59 PM  |   Last Updated: 16th October 2019 03:01 PM   |  A+A-


ಸಂಚಾರ ದಟ್ಟಣೆ ತಪ್ಪಿಸಲು ಟಿನ್ ಫ್ಯಾಕ್ಟರಿ-ಸಿಲ್ಕ್ ಬೋರ್ಡ್ ನಡುವೆ ಪ್ರತ್ಯೇಕ ಬಸ್ ಪಥ-ಅ.20 ಕ್ಕೆ ಚಾಲನೆ!

Posted By : Srinivas Rao BV
Source : Online Desk

ಬೆಂಗಳೂರು: ಸಂಚಾರ ದಟ್ಟಣೆ ತಪ್ಪಿಸಲು ನಗರದ 12 ಪ್ರಮುಖ ರಸ್ತೆಗಳಲ್ಲಿ ಬಸ್ ಪಥವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅ.20 ರಂದು ಟಿನ್ ಫ್ಯಾಕ್ಟರಿ- ಸಿಲ್ಕ್ ಬೋರ್ಡ್ ನಡುವೆ ಪ್ರತ್ಯೇಕ ಬಸ್ ಪಥಕ್ಕೆ ಚಾಲನೆ ಸಿಗಲಿದೆ. 

ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಬಿಎಂಪಿ ವತಿಯಿಂದ ಬಿಎಂಟಿಸಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ 'ಬಸ್ ಪಥ'ವನ್ನು 12 ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಲಾಗುತ್ತಿದೆ. ಸಂಚಾರ ದಟ್ಟಣೆ ತಪ್ಪಿಸಲು ಪ್ರಾಯೋಗಿಕವಾಗಿ ಅ.20 ರಿಂದ ಕೆ ಆರ್ ಪುರಂ - ಮಾರತ್ ಹಳ್ಳಿವರೆಗೆ 'ಬಸ್ ಪಥ'ಕ್ಕೆ ಚಾಲನೆ ಸಿಗಲಿದೆ. ಸಾರ್ವಜನಿಕರು ಬಿಎಂಟಿಸಿ ಸಾರಿಗೆ ಬಳಸಿ, ರಸ್ತೆ ಸಂಚಾರ ದಟ್ಟಣೆ ತಪ್ಪಿಸಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. 

ಇನ್ನು ಬಿಎಂಟಿಸಿ ಎಂ.ಡಿ ಸಿ.ಶಿಖಾ ರಾಜ್ಯ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಅವರ ತಂಡ ಬಿಎಂಟಿಸಿಯ ಪ್ರತ್ಯೇಕ ಬಸ್ ಪಥವನ್ನು ಬಿಎಂಟಿಸಿ ಬಸ್ ನಲ್ಲಿಯೇ ತೆರಳಿ ಪರಿಶೀಲನೆ ನಡೆಸಿದೆ. ಕೆ.ಆರ್.ಪುರ, ಟಿನ್ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಬಸ್ ಪಥ ನಿರ್ಮಾಣವಾಗಲಿದೆ. 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಸ್ ಪಥದಲ್ಲಿ ಬಿಎಂಟಿಸಿ ಬಸ್ ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp