ಬಂಡವಾಳ ಆಕರ್ಷಣೆಗೆ ಗುಜರಾತ್ ಮಾದರಿ ಅಳವಡಿಸಿಕೊಳ್ಳಲು ಮುಂದಾದ ಕರ್ನಾಟಕ

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಂಬಂಧಪಟ್ಟ ಅಧಿಕಾರಿಗಳಿಗೆ ಗುಜರಾತ್ ನ ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ-2009 ನ್ನು ಅಧ್ಯಯನ ಮಾಡಿ ರಾಜ್ಯದಲ್ಲಿ ಅದನ್ನು ಜಾರಿಗೆ ತರಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಸೂಚಿಸುವಂತೆ ಹೇಳಿದ್ದಾರೆ. 
ಗುಜರಾತ್ ಮಾದರಿ ಅಳವಡಿಸಿಕೊಳ್ಳಲು ಮುಂದಾದ ಕರ್ನಾಟಕ
ಗುಜರಾತ್ ಮಾದರಿ ಅಳವಡಿಸಿಕೊಳ್ಳಲು ಮುಂದಾದ ಕರ್ನಾಟಕ

ಬೆಂಗಳೂರು: ಕರ್ನಾಟಕ ಕೈಗಾರಿಕಾ ನೀತಿ-2020 ತಯಾರಾಗುತ್ತಿದ್ದು, ಸುಮಾರು 5 ಲಕ್ಷ ಕೋಟಿಗಳ ಹೂಡಿಕೆ ತರಲು ರಾಜ್ಯ ಸರ್ಕಾರ ಗುರಿ ಇಟ್ಟುಕೊಂಡಿದೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಂಬಂಧಪಟ್ಟ ಅಧಿಕಾರಿಗಳಿಗೆ ಗುಜರಾತ್ ನ ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ-2009 ನ್ನು ಅಧ್ಯಯನ ಮಾಡಿ ರಾಜ್ಯದಲ್ಲಿ ಅದನ್ನು ಜಾರಿಗೆ ತರಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಸೂಚಿಸುವಂತೆ ಹೇಳಿದ್ದಾರೆ. 

ಹೂಡಿಕೆಯನ್ನು ಆಕರ್ಷಿಸುವುದಕ್ಕೆ ವಿಶೇಷ ಹೂಡಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗುಜರಾತ್ ಮಾದರಿಯನ್ನು ಅನುಸರಿಸಲು ಕರ್ನಾಟಕವೂ ಮುಂದಾಗಿದೆ. ಕಳೆದ ಬಾರಿ ರೂಪಿಸಲಾಗಿದ್ದ ಕೈಗಾರಿಕಾ ನೀತಿಯಲ್ಲಿ  5 ಲಕ್ಷ ಕೋಟಿ ರೂಗಳಷ್ಟು ಬಂಡವಾಳ ಆಕರ್ಷಿಸುವ ಗುರಿ ಹೊಂದಲಾಗಿತ್ತು. ಆದರೆ ಬಂದಿದ್ದು 3.75 ಲಕ್ಷ ಕೋಟಿಯಷ್ಟು ಬಂಡವಾಳ. 

ಇನ್ನು ಇದೇ ವೆಳೆ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ (ಬಿಎಂಇಸಿ) ಬಗ್ಗೆಯೂ ಮಾತನಾಡಿರುವ ಕೈಗಾರಿಕಾ ಸಚಿವರು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಹಾಗೂ ಈ ಯೋಜನೆಗೆ ಕೇಂದ್ರದಿಂದ ಬಿಡುಗಡೆಯಾದ ಅನುದಾನದ ಬಗ್ಗೆಯೂ ಮಾಹಿತಿ ನೀಡುವಂತೆ ಕೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com