ಮಂಗಳೂರು: ಮೆಚ್ಚಿನ ಶಿಕ್ಷಕರ ವರ್ಗಾವಣೆ ಖಂಡಿಸಿ ಮಕ್ಕಳಿಂದ ತರಗತಿ ಬಹಿಷ್ಕಾರ!

ಬುಧವಾರ ದಸರಾ ರಜೆ ಮುಗಿಸಿ ಸರ್ಕಾರಿ ಶಾಲೆ ಮಕ್ಕಳು ತರಗತಿಗೆ ಹಾಜರಾಗಿದ್ದರು,  ಆದರೆ ಮಂಗಳೂರಿನ ಕಸಬಾ ಬೆಂಗ್ರೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮಕ್ಕಳಿಂದ ಪ್ರತಿಭಟನೆ
ಮಕ್ಕಳಿಂದ ಪ್ರತಿಭಟನೆ

ಮಂಗಳೂರು: ಬುಧವಾರ ದಸರಾ ರಜೆ ಮುಗಿಸಿ ಸರ್ಕಾರಿ ಶಾಲೆ ಮಕ್ಕಳು ತರಗತಿಗೆ ಹಾಜರಾಗಿದ್ದರು,  ಆದರೆ ಮಂಗಳೂರಿನ ಕಸಬಾ ಬೆಂಗ್ರೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಶಾಶ್ವತವಾಗಿ ನೇಮಕವಾಗಿದ್ದ ಐವರು ಶಿಕ್ಷಕರನ್ನು, ಕಡ್ಡಾಯ ವರ್ಗಾವಣೆ ನೀತಿಯ ಅನುಸಾರ  ವರ್ಗಾವಣೆ ಮಾಡಿದ್ದಕ್ಕೆ ಮಕ್ಕಳು ತರಗತಿ ಬಹಿಷ್ಕರಿಸಿದರು.

ಸುಮಾರು 200 ವಿದ್ಯಾರ್ಥಿಗಳು ಶಾಲೆಯ ಮುಂಭಾಗ ಸೇರಿ ತರಗತಿ ಬಹಿಷ್ಕರಿಸಿದ್ದರು, ನಮಗೆ ನ್ಯಾಯ ಬೇಕು, ಶಿಕ್ಷಕರು ಎಂಬ ಘೋಷಣೆ ಕೂಗುತ್ತಿದ್ದರು. ಐವರು ಶಿಕ್ಷಕರು ಉತ್ತಮ ವಾಕಿ ಪಾಠ ಹೇಳಿಕೊಡುತ್ತಿದ್ದರು, ವಿದ್ಯಾರ್ಥಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ಸರ್ಕಾರ ವರ್ಗಾವಣೆ ಆದೇಶವನ್ನು ವಾಪಸ್ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಧ್ಯಾಹ್ನದವರೆಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು,  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳ ಅಹವಾಲು ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com