ಮಂಡ್ಯದಲ್ಲಿ ನವವಿವಾಹಿತೆ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರಿಗೆ ಕರೆ ಮಾಡಿ ನಾಪತ್ತೆಯಾಗಿದ್ದ ನವವಿವಾಹಿತೆ ಮೃತದೇಹ ಗುತ್ತಲು ಅರ್ಕೇಶ್ವರ ದೇವಾಲಯದ ಬಳಿ ಹೆಬ್ಬಾಳದಲ್ಲಿ ಪತ್ತೆಯಾಗಿದೆ. 

Published: 17th October 2019 10:06 AM  |   Last Updated: 17th October 2019 11:53 AM   |  A+A-


Married woman commits suicide in Mandya

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : RC Network

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರಿಗೆ ಕರೆ ಮಾಡಿ ನಾಪತ್ತೆಯಾಗಿದ್ದ ನವವಿವಾಹಿತೆ ಮೃತದೇಹ ಗುತ್ತಲು ಅರ್ಕೇಶ್ವರ ದೇವಾಲಯದ ಬಳಿ ಹೆಬ್ಬಾಳದಲ್ಲಿ ಪತ್ತೆಯಾಗಿದೆ. 

ತಾಲೂಕಿನ ಈಚಗೆರೆಯ ಸಿದ್ದರಾಮು ಎಂಬುವರ ಪುತ್ರಿ ಭವಾನಿ(26)ಯನ್ನು 6 ತಿಂಗಳ ಹಿಂದೆ ಮಾರಸಿಂಗನಹಳ್ಳಿಯ ಶಶಿ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮಂಗಳವಾರ ಮಧ್ಯಾಹ್ನ 3.30ರಲ್ಲಿ ಸಹೋದರಿ ಸಹನಾರ ಮೊಬೈಲ್ನಾ ಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕರೆ ಕಟ್ ಮಾಡಿದ್ದರು. 

ಬಳಿಕ ಹುಡುಕಾಡಿದಾಗ ಅವರ ಮೊಬೈಲ್ ಹಾಗೂ ಬ್ಯಾಗ್ ನಗರದ ಹೊರವಲಯದ ಅಗ್ನಿಶಾಮಕ ದಳದ ಬಳಿ ಹೆಬ್ಬಾಳದ ದಡದಲ್ಲಿ ಪತ್ತೆಯಾಗಿದ್ದವು. ಹೆಬ್ಬಾಳಕ್ಕೆ ಹಾರಿದ್ದಾರೋ ಅಥವಾ ಹೆದರಿಸಲು ಎಲ್ಲಿಯಾದರು ಹೋಗಿದ್ದಾರೋ ಎಂಬ ಅನುಮಾನವಿತ್ತು. ಜತೆಗೆ ಹೆಬ್ಬಾಳದ ಉದ್ದಕ್ಕೂ ಹುಡುಕಾಟ ಮಾಡಲಾಗುತ್ತಿತ್ತು. ಗುರುವಾರ ಬೆಳಗ್ಗೆ 8 ಗಂಟೆಗೆ ಮೃತದೇಹ ಸಿಕ್ಕಿದೆ. ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ಸಾಗಿಸಲಾಗಿದೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ನಾಗಯ್ಯ
 

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp