ಅಕ್ರಮ ಹಣ ವರ್ಗಾವಣೆ ಪ್ರಕರಣ: ನನ್ನ ವಿರುದ್ಧ ಯಾವುದೇ ತನಿಖೆ ಇಲ್ಲ- ರಾಜಣ್ಣ

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನ ವಿರುದ್ಧ ತನಿಖೆ ನಡೆಸಿಲ್ಲ ಎಂದು ಕಾಂಗ್ರೆಸ್ ರೆಬೆಲ್ ನಾಯಕ ಕೆ.ಎನ್. ರಾಜಣ್ಣ ಅವರು ಹೇಳಿದ್ದಾರೆ. 
ರಾಜಣ್ಣ
ರಾಜಣ್ಣ

ತುಮಕೂರು: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನ ವಿರುದ್ಧ ತನಿಖೆ ನಡೆಸಿಲ್ಲ ಎಂದು ಕಾಂಗ್ರೆಸ್ ರೆಬೆಲ್ ನಾಯಕ ಕೆ.ಎನ್. ರಾಜಣ್ಣ ಅವರು ಹೇಳಿದ್ದಾರೆ. 

ಜಿಲ್ಲಾ ಕೇಂದ್ರೀಯ ಕೋ-ಅಪರೇಟಿವ್ ಬ್ಯಾಂಕ್ ಗಳಿಗೆ ಮದರ್ ಬ್ಯಾಂಕ್ ಎಂದು ಹೇಳಲಾಗುವ ಸ್ಟೇಟ್ ಅಪೆಕ್ಸ್ ಬ್ಯಾಂಕ್'ನಲ್ಲಿ ರಾಜಣ್ಣ ಅವರು ಮುಖ್ಯಸ್ಥರಾಗಿದ್ದು, ಈ ಹಿಂದೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೇರಿದ ಹರ್ಷ ಸಕ್ಕರೆ ಕಾರ್ಖಾನೆಗೆ ರೂ.300 ಕೋಟಿ ದೊಡ್ಡ ಮೊತ್ತದ ಸಾಲವನ್ನು ಬ್ಯಾಂಕ್ ವತಿಯಿಂದ ನೀಡಿದ್ದರು. ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿಯೂ ರೂ.25 ಕೋಟಿ ಸಾಲ ನೀಡಲಾಗಿತ್ತು. 

28 ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿದ್ದ ಸಾಲ ಹಾಗೂ ವೈಯಕ್ತಿಕವಾಗಿ ಹಣ ವರ್ಗಾವಣೆ ಮಾಡಿದ ಕುರಿತು ಈಗಾಗಲೇ ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದೇನೆಂದು ರಾಜಣ್ಣ ಅವರು ಹೇಳಿದ್ದಾರೆ. 

ಇದು ನನ್ನ ವಿರುದ್ಧದ ತನಿಖೆಯಲ್ಲ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಲ್ಲ. ಪ್ರಸ್ತುತ ನಾನು ನೀಡಿರುವ ದಾಖಲೆಗಳನ್ನು ಅಧಿಕಾರಿಗಳು ಪರಿಗಣಿಸಿದ್ದು, ದಾಖಲೆಗಳಿಂದ ಅಧಿಕಾರಿಗಳಿಗೆ ಮನವರಿಕೆಯಾಗಿದೆ ಎಂದು ತಿಳಿಸಿದ್ದಾರೆ. 

ವಿಚಾರಣೆ ವೇಳೆ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಅವರೂ ಕೂಡ ರಾಜಣ್ಣ ಅವರೊಂದಿಗೆ ಇಡಿ ಮುಂದೆ ಹಾಜರಾಗಿದ್ದು. ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶಿವಣ್ಣ ಅವರು ವಿಚಾರಣೆಗೆ ವೇಳೆ ಯಾವ ಕಾರಣಕ್ಕೆ ಸ್ಥಳಕ್ಕೆ ಬಂದಿದ್ದರು ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com