ಇಂದು ತಡರಾತ್ರಿ ತಲಕಾವೇರಿ ತೀರ್ಥೋದ್ಭವ

ಕಾವೇರಿ ನದಿಯ ಉಗಮ ಸ್ಥಳ ಕೊಡಗಿನ ತಲಾ ಕಾವೇರಿಯಲ್ಲಿ ಗುರುವಾರ ತಡರಾತ್ರಿ 12 ಗಂಟೆ 59 ನಿಮಿಷಕ್ಕೆ ಪವಿತ್ರ ತುಲಾ ಸಂಕ್ರಮಣ ತೀರ್ಥೋದ್ಭವ ಘಟಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಳ ಕೊಡಗಿನ ತಲಾ ಕಾವೇರಿಯಲ್ಲಿ ಗುರುವಾರ ತಡರಾತ್ರಿ 12 ಗಂಟೆ 59 ನಿಮಿಷಕ್ಕೆ ಪವಿತ್ರ ತುಲಾ ಸಂಕ್ರಮಣ ತೀರ್ಥೋದ್ಭವ ಘಟಿಸಲಿದೆ.

ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಅ.18 ರಂದು ತೀರ್ಥೋದ್ಭವ ನಡೆಯಲಿದ್ದು, ಈ ವಾರ್ಷಿಕ ಕಾರ್ಯಕ್ರಮಕ್ಕೆ ಕೊಡಗು ಸಜ್ಜಾಗಿದೆ. ಈ ಕುರಿತಂತೆ ಭಾಗಮಂಡಲದ ತಲಕಾವೇರಿ ದೇವಸ್ಥಾನದ ತಟದಲ್ಲಿ ಬೆಳಗ್ಗೆ 12.59 ಕ್ಕೆ ಸರಿಯಾಗಿ ತೀರ್ಥೋದ್ಭವವಾಗಲಿದೆ ಎಂದು ದೇವಸ್ಥಾನದ ಆಡಳಿತ  ಸಮಿತಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ದೇಗುಲದ ಆಡಳಿತ ಮಂಡಳಿ ಸದಸ್ಯ ಕಾವೇರಪ್ಪ ಅವರು, 'ಈಗಾಗಲೇ ರಾಜ್ಯ ಮತ್ತು ಹೊರರಾಜ್ಯಗಳ ಸಾವಿರಾರು ಭಕ್ತರು ತಲಾ ಕಾವೇರಿಯತ್ತ ಧಾವಿಸಿದ್ದಾರೆ. ತೀರ್ಥೋದ್ಭವಕ್ಕೆ ಆಗಮಿಸಿವ ಭಕ್ತಾದಿಗಳಿಗೆ ವಿರಾಜಪೇಟೆಯಿಂದ ತಲಕಾವೇರಿ. ವಿರಾಜಪೇಟೆ-ಕಾಡನೂರ್ -ಕೊಡಂಗ -ಎಡಪಾಲ-ನಾಪೊಕ್ಲು-ನೀಲಾಜಿ-ಬಲ್ಲಮಾವತಿ-ಅಯ್ಯಂಗೇರಿ-ಭಾಗಮಂಡಲ ರಸ್ತೆಯಾಗಿ ತಲಕಾವೇರಿ ಪ್ರವೇಶಿಸಬಹುದೆಂದು' ತಿಳಿಸಿದ್ದಾರೆ.

ಈ ವಾರ್ಷಿಕ ಕಾರ್ಯಕ್ರಮಕ್ಕೆ ಕೊಡಗು ಸಜ್ಜಾಗಿದ್ದು, ಎಲ್ಲೆಡೆ ದಾರಿ ದೀಪಗಳು,ಎಲ್ಇಡಿ ಬಲ್ಬ್​ಗಳನ್ನು ಅಳವಡಿಸಲಾಗಿದೆ. ತೀರ್ಥೊದ್ಭವದ ನಂತರ ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com