ನಮ್ಮ ಪಾಲಿನ ನೀರು ನಮಗೆ ಕೊಡಿ: ಉತ್ತರ ಕರ್ನಾಟಕ ರೈತರ ಆಗ್ರಹ

ಮಹದಾಯಿ ನದಿ ನೀರು ಯೋಜನೆ ಸಂಬಂಧ ಉತ್ತರ ಕರ್ನಾಟಕ ನೂರಾರು ರೈತರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದ್ದು, ನಮ್ಮ ಪಾಲಿನ ನೀರನ್ನು ನಮಗೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. 
ಪ್ರತಿಭಟನಾನಿರತ ಮಹಿಳೆಯರು
ಪ್ರತಿಭಟನಾನಿರತ ಮಹಿಳೆಯರು

ಬೆಂಗಳೂರು: ಮಹದಾಯಿ ನದಿ ನೀರು ಯೋಜನೆ ಸಂಬಂಧ ಉತ್ತರ ಕರ್ನಾಟಕ ನೂರಾರು ರೈತರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದ್ದು, ನಮ್ಮ ಪಾಲಿನ ನೀರನ್ನು ನಮಗೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. 

ಉತ್ತರ ಕರ್ನಾಟಕ 4 ಜಿಲ್ಲೆಗಳ 11 ತಾಲೂಕುಗಳಿಂದ 700ಕ್ಕೂ ಹೆಚ್ಚು ಜನರು ನಗರಕ್ಕೆ ಆಗಮಿಸಿದ್ದು, ಮಹದಾಯಿ ನದಿ ನೀರು ಹಂಚಿಕೆಗೆ ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. 

ನದಿ ನೀರು ಉತ್ತರ ಕರ್ನಾಟಕ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ನೀರಿಲ್ಲದೆ, ಜನರ ಭೂಮಿ ಬರಡಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಭಾರೀ ಮಳೆಯಾಗಿದ್ದು, ಇದೀಗ ಜನರು ಪ್ರವಾಹ ಪರಿಸ್ಥಿತಿಯನ್ನೂ ಎದುರಿಸುತ್ತಿದ್ದಾರೆ. 

ಬೆಳಗಾವಿಯ ಮುಳ್ಳೂರು ಗ್ರಾಮದ ನಿವಾಸಿ ಲಚ್ಚವ್ವ ಮಾತನಾಡಿ, ಹಲವು ವರ್ಷಗಳಿಂದಲೂ ಗ್ರಾಮದಲ್ಲಿ ಸುದೀರ್ಘವಾಗಿ ಬರ ಎದುರಾಗಿದೆ. ಹತ್ತಿ, ಕಾಳುಗಳಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 

ಈ ವರ್ಷ ಪ್ರವಾಹ ಎದುರಾಗಿದ್ದು, ಎಲ್ಲಾ ಬೆಳೆಗಳೂ ನಾಶಗೊಂಡಿವೆ. ನಮ್ಮ ಕೃಷಿ ಭೂಮಿಯ ಮಣ್ಣು ನಾಶವಾಗಿದೆ. ಭೂಮಿಯ ಒಡಲಿನ ನೀರು ಕೂಡ ಬತ್ತು ಹೋಗಿದೆ. ಬೋರ್ ವೆಲ್ ಗಳನ್ನು ಕೊರೆಸಿದರೂ ನಮಗೆ ನೀರು ಸಿಗುತ್ತಿಲ್ಲ. ಮಳೆಯಿಲ್ಲ, ನೀರಿಲ್ಲ. ನಮ್ಮಿಂದ ಜನರು ಇಳುವರಿಯನ್ನು ಹೇಗೆ ಬಯಸುತ್ತಾರೆ? ನನಗೆ ಮೂರು ಜನ ಮಕ್ಕಳಿದ್ದಾರೆ. ಇಬ್ಬರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬ ಮಗ ಕೃಷಿಯನ್ನೇ ಅವಲಂಬಿಸಿದ್ದಾನೆ. ಮಲಪ್ರಭಾ ನದಿ ತುಂಬಿದರೆ, ನಮ್ಮ ಕೆರೆಗಳೂ ತುಂಬುತ್ತವೆ. ನಮಗೂ ನೀರು ಸಿಗುತ್ತದೆ ಎಂದು ತಿಳಿಸಿದ್ದಾರೆ. 

ಈ ಹಿಂದೆ 8 ದಿನಗಳಿಗೊಮ್ಮೆ ಕುಡಿಯಲು ನೀರು ಸಿಗುತ್ತಿತ್ತು. ಇದೀಗ ವ್ಯವಸ್ಥೆ ಸುಧಾರಿಸಿದೆ. 4 ದಿನಗಳಿಗೊಮ್ಮೆ ನಮಗೆ ಕುಡಿಯಲು ನೀರು ಸಿಗುತ್ತಿದೆ. ಕೆಲವೊಮ್ಮೆ 6 ದಿನಗಳಿಗೊಮ್ಮೆ ಸಿಗುತ್ತದೆ. ಭಾರೀ ಮಳೆಯಿಂದಾಗಿ ಮಲಪ್ರಭಾ ತುಂಬಿದ ಪರಿಣಾಮ ನೀರು ಸಿಗುತ್ತಿದೆ. ಕಳೆದ 23 ವರ್ಷಗಳಿಂದ ನಾವು ಸಂಕಷ್ಟ ಎದುರಿಸುತ್ತಿದ್ದೇವೆ. 27 ವರ್ಷಗಳಿಂದಲೂ ಬರ ಪರಿಸ್ಥಿತಿ ಎದುರಾಗಿದೆ. ಇಂತಹ ಮಳೆ ಹಲವು ವರ್ಷಗಳಿಂದ ಬಂದಿರಲಿಲ್ಲ. ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಕುಡಿಯಲು ನೀರಿಗೆ ಮಲಪ್ರಭಾ ನದಿಯೇ ಆಧಾರ. ವಾರದಲ್ಲಿ 4 ಅಥವಾ 6ನೇ ದಿನದಲ್ಲಿ ನಮಗೆ ನೀರನ್ನು ಪೂರೈಸಲಾಗುತ್ತದೆ ಎಂದು ಮನಂದಮ್ಮ ಹಿರೇಮಠ ಅವರು ಹೇಳಿದ್ದಾರೆ. 

ಗ್ರಾಮಗಳಲ್ಲಿ ನೀರು ಬೇಕೆಂದರೆ 2-3 ಕಿಮೀ ನಡೆಯಬೇಕು. ಹೀಗಾಗಿಯೇ ಇಲ್ಲಿನ ಹುಡುಗರಿಗೆ ವಧುಗಳು ಸಿಗುತ್ತಿಲ್ಲ. 5 ಎಕರೆ ಸ್ವಂತ ಭೂಮಿಯಿದ್ದು, ಅಲ್ಲಿ ಜೋಳ ಹಾಗೂ ಮೆಕ್ಕೆಜೋಳವನ್ನು ಬೆಳೆಯುತ್ತೇವೆ. ನೀರು ತರಲು ಸಾಕಷ್ಟು ದೂರ ಹೋಗಬೇಕಿರುವುದರಿಂದ ವಿವಾಹ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇಲ್ಲದೇ ಹೋದರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ನೋಡುತ್ತಾರೆಂದು ಮನಂದಮ್ಮ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com