ಪರೀಕ್ಷೆಯಲ್ಲಿ ಚೀಟಿಂಗ್ ತಪ್ಪಿಸಲು ಕಾಲೇಜು ಮಾಡಿತು 'ಡಬ್ಬಾ' ಐಡಿಯಾ!

ವಿದ್ಯಾರ್ಥಿಗಳು ಪರೀಕ್ಷೆ ನಕಲು ಮಾಡುವುದನ್ನು ತಪ್ಪಿಸಲು ಕಾಲೇಜಿನ ಆಡಳಿತ ಮಂಡಗಳು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ರಾಜ್ಯದ ಖಾಸಗಿ ಕಾಲೇಜೊಂದು ಚೀಟಿಂಗ್ ತಪ್ಪಿಸಲು 'ಡಬ್ಬಾ' ಐಡಿಯಾ ಮಾಡಿದೆ. 
ಪರೀಕ್ಷೆಯಲ್ಲಿ ಚೀಟಿಂಗ್ ತಪ್ಪಿಸಲು ಕಾಲೇಜು ಮಾಡಿತು 'ಡಬ್ಬಾ' ಐಡಿಯಾ!
ಪರೀಕ್ಷೆಯಲ್ಲಿ ಚೀಟಿಂಗ್ ತಪ್ಪಿಸಲು ಕಾಲೇಜು ಮಾಡಿತು 'ಡಬ್ಬಾ' ಐಡಿಯಾ!

ಹೆಲ್ಮೆಟ್'ನಂತೆ ರಟ್ಟಿನ ಡಬ್ಬಾ ಹಾಕಿಸಿ ಪರೀಕ್ಷೆ ಬರೆಸಿದ ಭಗತ್ ಕಾಲೇಜು: ಹಾವೇರಿಯಲ್ಲೊಂದು ವಿಚಿತ್ರ ಪ್ರಯೋಗ


ಹಾವೇರಿ: ವಿದ್ಯಾರ್ಥಿಗಳು ಪರೀಕ್ಷೆ ನಕಲು ಮಾಡುವುದನ್ನು ತಪ್ಪಿಸಲು ಕಾಲೇಜಿನ ಆಡಳಿತ ಮಂಡಗಳು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ರಾಜ್ಯದ ಖಾಸಗಿ ಕಾಲೇಜೊಂದು ಚೀಟಿಂಗ್ ತಪ್ಪಿಸಲು 'ಡಬ್ಬಾ' ಐಡಿಯಾ ಮಾಡಿದೆ. 

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಬಾಕ್ಸ್ ಗಳನ್ನು ಹಾಕಿಸಿ ಪರೀಕ್ಷೆ ಬರೆಸಿರುವ ವಿಚಿತ್ರ ಪ್ರಯೋಗವೊಂದು ಹಾವೇರಿಯಲ್ಲಿ ನಡೆದಿದೆ. 

ಹಾವೇರಿಯ ಹಾನಗಲ್ಲ ರಸ್ತೆಯಲ್ಲಿರುವ ಭಗತ್ ಪದವಿಪೂರ್ವ ಕಾಲೇಜಿನಲ್ಲಿ ನಕಲು ಮಾಡಬಾರದೆಂದು ಅ.16ರಂದು ನಡೆದ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ವರ್ಷದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೆಲ್ಮೆಟ್'ಗಳಂತೆ ರಟ್ಟಿನ ಬಾಕ್ಸ್ ಗಳನ್ನು ಹಾಕಿಸಿ ಪರೀಕ್ಷೆ ಬರೆಸಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಅಲ್ಲದೆ, ಈ ಬಗ್ಗೆ ಪರ ಹಾಗೂ ವಿರೋಧದ ಕುರಿತು ಚರ್ಚೆಗಳೂ ಆರಂಭವಾಗಿವೆ. 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋವನ್ನು ಗಮಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಕೂಡಲೇ ಕಾಲೇಜಿಗೆ ಭೇಟಿ ನೀಡಿದ್ದು, ಕಾಲೇಜು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ರಟ್ಟಿನ ಪೆಟ್ಟಿಗೆಗಳನ್ನು ತೆಗೆಸಿದ್ದಾರೆ. 

ಪರೀಕ್ಷಾ ಪದ್ಧತಿ, ನಿಯಮ ಮೀರಿ ನಿಮಗೆ ತೋಚಿದಂತೆ ಪರೀಕ್ಷೆ ಮಾಡಲು ಅವಕಾಶವಿಲ್ಲ ಎಂದು ಹೇಳಿರುವ ಅಧಿಕಾರಿಗಳು, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 

ಅಲ್ಲದೆ, ಇದೇ ರೀತಿ ಮುಂದುವರೆಸಿದರೆ ಕಾಲೇಜಿಗೆ ನೀಡಿರುವ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ ಎಂದೂ ಕೂಡ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com