ನ.1ರಿಂದ ನಾಮಫಲಕ ಕಡ್ಡಾಯ: ನಿಯಮ ಪಾಲಿಸದವರ ಪರವಾನಗಿ ರದ್ದು- ಬಿಬಿಎಂಪಿ ಆದೇಶ

ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಉದ್ದಮೆ, ಮಾಲ್, ಹೋಟೆಲ್ ಹಾಗೂ ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ನ.1ರ ಕನ್ನಡ ರಾಜ್ಯೋತ್ಸವದ ಒಳಗಾಗಿ ಶೇ.60ರಷ್ಟು ಕನ್ನಡ ಭಾಷೆಯ ನಾಮಪಲಕ ಪ್ರದರ್ಶನ ಕಡ್ಡಾಯಗೊಳಿಸಬೇಕೆಂದು ಬಿಬಿಎಂಪಿ ಆದೇಶಿಸಿದೆ. 

Published: 20th October 2019 07:39 AM  |   Last Updated: 20th October 2019 07:39 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಉದ್ದಮೆ, ಮಾಲ್, ಹೋಟೆಲ್ ಹಾಗೂ ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ನ.1ರ ಕನ್ನಡ ರಾಜ್ಯೋತ್ಸವದ ಒಳಗಾಗಿ ಶೇ.60ರಷ್ಟು ಕನ್ನಡ ಭಾಷೆಯ ನಾಮಪಲಕ ಪ್ರದರ್ಶನ ಕಡ್ಡಾಯಗೊಳಿಸಬೇಕೆಂದು ಬಿಬಿಎಂಪಿ ಆದೇಶಿಸಿದೆ. 

ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯ ಸೂಚನೆ ಮೇರೆಗೆ ಬಿಬಿಂಪಿ ಆಯುಕ್ತ ಅನಿಲ್ ಕುಮಾರ್ ಅವರು ಈ ಆದೇಶವನ್ನು ಹೊರಡಿಸಿದ್ದು, ಬಿಬಿಎಂಪಿಯ ಆರೋಗ್ಯ ವಿಭಾಗದಿಂದ ಉದ್ದಿಮೆ ಪರವಾನಗಿ ಪಡೆಯುವ ಅಂಗಡಿ ಮುಂಗಟ್ಟು, ಹೋಟೆಲ್, ಕಂಪನಿ ಹಾಗೂ ಇತರೆ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ಶಾಖೆಯ ಮುಂದೆ ಅಳವಡಿಸಲಾಗಿರುವ ಮತ್ತು ಅಳವಡಿಸುವ ನಾಮಫಲಕದಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡಬೇಕು. 

ಅಂಗಡಿಗಳಲ್ಲಿ ಅಳವಡಿಸುವ ನಾಮಫಲಕದಲ್ಲಿ ಕನಿಷ್ಠ ಶೇ.60ರಷ್ಟು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮತ್ತು ದಪ್ಪ ಅಕ್ಷರದಲ್ಲಿ ಬಳಸಬೇಕು. ಒಂದು ವೇಳೆ ಕನ್ನಡ ಭಾಷೆ ಬಳಕೆ ಮಾಡದಿರುವುದು ಕಂಡು ಬಂದಿದ್ದೇ ಆದರೆ, ಉದ್ದಿಮೆ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಆಯುಕ್ತರು ಆದೇಶದಲ್ಲಿ ಎಚ್ಚರಿಸಿದ್ದಾರೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp