ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಸ್ಫೋಟ, ಓರ್ವನಿಗೆ ಗಾಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದ್ದು ಜನರು ಭಯಭೀತರಾಗಿದ್ದಾರೆ. ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಸೋಮವಾರ ಮಧ್ಯಾಹ್ನ ಈ ಸ್ಪೋಟ ಸಂಭವಿಸಿದೆ, ಸ್ಪೋಟದಲ್ಲಿ  ಸ್ಟೇಷನ್ ಮಾಸ್ಟರ್ಸ್ ಕಚೇರಿಯ ಗಾಜಿನ ಬಾಗಿಲು ಒಡೆದಿದ್ದಲ್ಲದೆ ಓರ್ವನ ಸ್ಥಿತಿ ಗಂಭೀರವಾಗಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಸ್ಫೋಟ, ಓರ್ವನಿಗೆ ಗಾಯ
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಸ್ಫೋಟ, ಓರ್ವನಿಗೆ ಗಾಯ

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದ್ದು ಜನರು ಭಯಭೀತರಾಗಿದ್ದಾರೆ. ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಸೋಮವಾರ ಮಧ್ಯಾಹ್ನ ಈ ಸ್ಪೋಟ ಸಂಭವಿಸಿದೆ, ಸ್ಪೋಟದಲ್ಲಿ  ಸ್ಟೇಷನ್ ಮಾಸ್ಟರ್ಸ್ ಕಚೇರಿಯ ಗಾಜಿನ ಬಾಗಿಲು ಒಡೆದಿದ್ದಲ್ಲದೆ ಓರ್ವನ ಸ್ಥಿತಿ ಗಂಭೀರವಾಗಿದೆ.

ಇದೊಂದು ಕಡಿಮೆ ತೀವ್ರತೆಯ ಸ್ಫೋಟವಾಗಿದ್ದು ಹುಬ್ಬಳ್ಳಿಯ ಮಂತೂರು ರಸ್ತೆಯ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಗಾಯಾಳುವನ್ನು  ಹುಸೇನ್ ಸಾಬ್ (22) ಎಂದು ಗುರುತಿಸಲಾಗಿದ್ದು ಈತ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ 

"ಗಾಯಗೊಂಡ ಹುಸೇನ್ ಕೈಯಲ್ಲಿ ಸಾಗಿಸುತ್ತಿದ್ದ ಸೂಟ್‌ಕೇಸ್ ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಫೋಟದಿಂದಾಗಿ ಷನ್ ಮಾಸ್ಟರ್ ಕಚೇರಿಯ ಕಿಟಕಿಗಳನ್ನು ಒಡೆದಿದೆ. ಸ್ಥಳಕ್ಕೆ ಬಾಂಬ್ ಪತ್ತೆ ದಳ ಹಾಗೂ ವಿಶೇಷ ತನಿಖಾ ದಳಗಳನ್ನು ಕಳಿಸಲಾಗಿದೆ.ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ನಡೆಯುತ್ತಿದ್ದು ಗೆ ನಾಗರಿಕರು ಶಾಂತರೀತಿಯಿಂದ ವರ್ತಿಸಬೇಕೆಂದು ಪೊಲೀಸರು ಕೋರಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ  ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಜಕೀಯ ಸಂದೇಶ ಹೊಂದಿದ್ದ ಪೆಟ್ಟಿಗೆ

ಸ್ಫೋಟವಾಗಿರುವ ಪೆಟ್ಟಿಗೆ ಮೇಲೆ ರಾಜಕೀಯ ಸಂದೇಶವಿತ್ತು ಎಂದು ಹೇಳಲಾಗಿದೆ. ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ‘ಬಿಜೆಪಿ ಬೇಡ, ಕಾಂಗ್ರೆಸ್ ಬೇಡ, ಶಿವಸೇನೆ ಮಾತ್ರ’ ಎಂಬ ಕೈಬರಹದ ಸಂದೇಶ ಹೊಂದಿದ್ದ ಬಾಕ್ಸ್ ಇದ್ದು ಇದೇ ಬಾಕ್ಸ್ ಸ್ಫೋಟವಾಗಿ ಆತಂಕಕ್ಕೆ ಕಾರಣವಾಗಿದೆ.

ರೈಲ್ವೆ ಅಧಿಕಾರಿಗಳು ಹುಸೇನ್ ಸಾಬ್ ಎಂಬುವರ ನೆರವಿನಿಂದ ಬಾಕ್ಸ್ ಅನ್ನು ತೆರೆಯಲು ಯತ್ನಿಸುತ್ತಿದ್ದಾಗ  ಈ ಸ್ಫೋಟ ಸಂಭವಿಸಿದ್ದು, ಹುಸೇನ್ ಗೆ ಗಂಭೀರ ಗಾಯಗಳಾಗಿವೆ
 

ಸೂಕ್ತ ತನಿಖೆಯಾಗಲಿದೆ: ಶೆಟ್ಟರ್

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ಪೋಟದ ಕುರಿತಂತೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು "ಘಟನೆ ಸಂಬಂಧ ತನಿಖೆ ನಡೆದಿದೆ.  ಹಿಂದೆ ಬಾಂಗ್ಲಾ ವಲಸಿಗರು ನಗರಕ್ಕೆ ನುಸುಳಿದ್ದರು.ಆಗ ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದ್ದೆ. ಆದರೆ ಅವರುಸೂಕ್ತ ಕ್ರಮ ತೆಗೆದುಕೊಳ್ಳದ ಕಾರಣ ಇದೆಲ್ಲಾ ಆಗುತ್ತಿದೆ.ಈಗ ಸರ್ಕಾರ ಹಾಗೂ ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ತನಿಖೆಗೆ ಆಗ್ರಹಿಸುತ್ತೇವೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com