ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆರೋಪಿ ಇಮ್ಮಡಿ ಮಹಾದೇವ ಸ್ವಾಮಿ ಬೆಂಬಲಿಗರರಿಂದ ಜೀವ ಬೆದರಿಕೆ

ಸುಳ್ವಾಡಿ ವಿಷ ಪ್ರಸಾದ ದುರಂತದ ಆರೋಪಿ ಇಮ್ಮಡಿ ಮಹಾದೇವ ಸ್ವಾಮಿ ಬೆಂಬಲಿಗರು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಪಟ್ಟದ ಗುರುಸ್ವಾಮೀಜಿಗೆ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆರೋಪಿ ಇಮ್ಮಡಿ ಮಹಾದೇವ ಸ್ವಾಮಿ ಬೆಂಬಲಿಗರರಿಂದ ಜೀವ ಬೆದರಿಕೆ
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆರೋಪಿ ಇಮ್ಮಡಿ ಮಹಾದೇವ ಸ್ವಾಮಿ ಬೆಂಬಲಿಗರರಿಂದ ಜೀವ ಬೆದರಿಕೆ

ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತದ ಆರೋಪಿ ಇಮ್ಮಡಿ ಮಹಾದೇವ ಸ್ವಾಮಿ ಬೆಂಬಲಿಗರು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಪಟ್ಟದ ಗುರುಸ್ವಾಮೀಜಿಗೆ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಹಿರಿಯ ಶ್ರೀಗಳು, ಇಮ್ಮಡಿ‌ ಮಹಾದೇವಸ್ವಾಮಿ ಬೆಂಬಲಿಗರು ನಿತ್ಯ ಮಠಕ್ಕೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೇ ಪ್ರಾಣ ಬೆದರಿಕೆ ಹಾಕುತ್ತಿದ್ದು, ಈ ಕುರಿತು ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಸಾಲೂರು ಮಠದಲ್ಲಿ ಮುಗಿಯದ ವಿವಾದ: 

ಬಳಿಕ, ವಿಲ್ ವಿಚಾರವಾಗಿ ಮಠದ ಭಕ್ತಾದಿಗಳು ತೀವ್ರ ಆಕ್ರೋಶ ಹೊರಹಾಕಿದ್ದರಿಂದ ಕಳೆದ ಅಕ್ಟೋಬರ್​ 13 ರಂದು ವಿಲ್ ವಾಪಸ್ ಪಡೆದಿದ್ದರು. ಈ ಕುರಿತು ತಮ್ಮ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿರುವ ಹಿರಿಯ ಶ್ರೀಗಳ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ವಿಲ್ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

ಸುಳ್ವಾಡಿ ವಿಷ ಪ್ರಸಾದ ದುರಂತದ ಬಳಿಕ ಕಾಣಿಕೆ ಹಸುಗಳ ಮಾರಾಟ, ಭಕ್ತರ ಗಮನಕ್ಕೆ ತರದೇ ಮರಣಶಾಸನ ಮಾಡಿದ್ದು, ಈಗ ಹಿರಿಯ ಸ್ವಾಮೀಜಿಗೆ ಜೀವ ಬೆದರಿಕೆ ಹಾಕಿರುವ ಘಟನೆಗಳ ಮೂಲಕ ಸಾಲೂರು ಮಠದ ಸುತ್ತ ವಿವಾದಗಳ ಸುರುಳಿ ಸುತ್ತಿಕೊಂಡಂತಾಗಿದೆ.

-ವರದಿ: ನಂದೀಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com