ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ: ರಾಜ್ಯಗಳ ನಡುವೆ ತೀವ್ರ ಪೈಪೋಟಿ 

ಎಲೆಕ್ಟ್ರಿಕ್ ವಾಹನಗಳು ಹೂಡಿಕೆ ಮಾಡಲು ಪ್ರಶಸ್ತ ಉದ್ಯಮ ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದ್ದು, ಹಲವು ರಾಜ್ಯಗಳು ಇದರಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಲು ಹಲವು ಆಕರ್ಷಕ ಯೋಜನೆಗಳನ್ನು ಕಂಪೆನಿಗಳಿಗೆ ನೀಡುವ ಮೂಲಕ ಪೈಪೋಟಿಗಿಳಿದಿವೆ.

ಬೆಂಗಳೂರು; ಎಲೆಕ್ಟ್ರಿಕ್ ವಾಹನಗಳು ಹೂಡಿಕೆ ಮಾಡಲು ಪ್ರಶಸ್ತ ಉದ್ಯಮ ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದ್ದು, ಹಲವು ರಾಜ್ಯಗಳು ಇದರಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಲು ಹಲವು ಆಕರ್ಷಕ ಯೋಜನೆಗಳನ್ನು ಕಂಪೆನಿಗಳಿಗೆ ನೀಡುವ ಮೂಲಕ ಪೈಪೋಟಿಗಿಳಿದಿವೆ.


ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿದ ವಿಶ್ಲೇಷಣೆ ಪ್ರಕಾರ, ಸಾರ್ವಜನಿಕ-ಖಾಸಗಿ ಸಹಕಾರದ ಅಂತಾರಾಷ್ಟ್ರೀಯ ಸಂಘಟನೆ ಮತ್ತು     ಒಲಾ ಮೊಬಿಲಿಟಿ ಸಂಸ್ಥೆ, ಕರ್ನಾಟಕ ಸೇರಿದಂತೆ 10 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮೂರು ವಲಯಗಳಾದ ಉತ್ಪಾದನೆ, ಮೂಲಭೂತ ಸೌಕರ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದೆ.


ವರದಿ ಪ್ರಕಾರ, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಉದ್ಯಮಗಳಿಗೆ ನಿವ್ವಳ ಎಸ್‌ಜಿಎಸ್‌ಟಿಯಲ್ಲಿ ಬಡ್ಡಿರಹಿತ ಸಾಲಗಳಂತಹ ಪ್ರೋತ್ಸಾಹದ ಜೊತೆಗೆ ಅಲ್ಟ್ರಾ ಮೆಗಾ ಮತ್ತು ಸೂಪರ್ ಮೆಗಾ ಇವಿ ಉದ್ಯಮಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲು ಕರ್ನಾಟಕ ಯೋಜಿಸುತ್ತಿದೆ. ಇವಿ/ಘಟಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬಳಸುವ ಭೂ ಪರಿವರ್ತನೆ ಶುಲ್ಕವನ್ನು ರಾಜ್ಯವು ಮರುಪಾವತಿ ಮಾಡುತ್ತದೆ.


ಈ ಯೋಜನೆಯು ಬ್ಯಾಟರಿ ಶೇಖರಣೆಯಲ್ಲಿ ರಾಜ್ಯದ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ. ಬ್ಯಾಟರಿಗಳಿಗಾಗಿ ಎರಡನೇ ದರ್ಜೆಯ ಮಾರುಕಟ್ಟೆಯನ್ನು ರಚಿಸಲು ಯೋಜಿಸಿದೆ. ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಉದ್ಯಮವಾಗಿ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಯೋಜಿಸಿದೆ. ಇ-ಮೊಬಿಲಿಟಿ ಸ್ಟಾರ್ಟ್ಅಪ್‌ಗಳನ್ನು ಉತ್ತೇಜಿಸಲು ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸುವುದರ ಜೊತೆಗೆ ಮೊದಲ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕರ್ನಾಟಕವು ಹೂಡಿಕೆ ಸಹಾಯಧನವನ್ನು ಸಹ ನೀಡಲಿದೆ.


ಬೆಂಗಳೂರನ್ನು ಸ್ಟಾರ್ಟ್ ಅಪ್ ಉದ್ಯಮದ ಕೇಂದ್ರವೆಂದು ಹೇಳಲಾಗುತ್ತಿದ್ದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಬೇಕಾದಂತಹ ಯೋಜನೆಗಳನ್ನು ರೂಪಿಸಲು ನಿರ್ದಿಷ್ಟ ನಿಖರತೆಯಲ್ಲಿ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ ಬೌನ್ಸ್ ಮತ್ತು ಯುಲುುನಂತಹ ಸ್ಟಾರ್ಟ್ ಅಪ್ ಗಳಿಗೆ ಪಾರ್ಕಿಂಗ್ ಮಾಡಲು ಮೂಲ ನೀತಿ ನಿಖರತೆಯಲ್ಲಿ ಕೊರತೆಯಿದೆ. ಈ ಕಂಪೆನಿಗಳು ಯಾವುದೇ ನೀತಿ ಮಧ್ಯಪ್ರವೇಶವಿಲ್ಲದೆ ಬಂದವಂತವುಗಳು ಎನ್ನುತ್ತಾರೆ ನಗರ ತಜ್ಞ ಎಎಂ ದೇವೇಂದ್ರನಾಥ್.

Related Stories

No stories found.

Advertisement

X
Kannada Prabha
www.kannadaprabha.com